Site icon PowerTV

ರಾವಣ, ದುರ್ಯೋಧನನಿಗೆ ಆದ ಗತಿಯೇ ನಿಮಗೂ : ಆರ್. ಅಶೋಕ್ ಕೆಂಡ

ಬೆಂಗಳೂರು : ತ್ರೇತಾ ಯುಗದಲ್ಲಿ ರಾವಣನಿಗೆ, ದ್ವಾಪರ ಯುಗದಲ್ಲಿ ದುರ್ಯೋಧನನಿಗೆ ಆದ ಗತಿಯೇ ಕಲಿಯುಗದ ರಾಮ ದ್ವೇಶಿಗಳಿಗೂ ಆಗಲಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್​ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಇಡೀ ಭಾರತ ದೇಶ ರಾಮಮಯವಾಗಿದೆ ಜನರೆಲ್ಲರೂ ಸ್ವಯಂಪ್ರೇರಿತರಾಗಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ಹಬ್ಬದ ವಾತಾವರಣವನ್ನ ಸಹಿಸದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರಜೆ ಕೊಡಲು ನಿರಾಕರಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೈಹಿಡಿದ ಮಡದಿ ಮಂಡೋದರಿ, ಒಡ ಹುಟ್ಟಿದ ತಮ್ಮ ವಿಭೀಷಣ ರಾಮ ದ್ವೇಷ ಬೇಡ ಎಂದು ಎಷ್ಟೇ ಹೇಳಿದರೂ ಕೇಳದ ರಾವಣನ ಗತಿ ಕಡೆಗೆ ಏನಾಯಿತು? ಅಧರ್ಮದ ಹಾದಿ ಹಿಡಿದು, ಸ್ವಂತ ದಾಯಾದಿಗಳ ಮೇಲೇ ಯುದ್ಧ ಸಾರಿ, ಶ್ರೀಕೃಷ್ಣನನ್ನು ಎದುರು ಹಾಕಿಕೊಂಡ ದುರ್ಯೋಧನನ ಕಥೆ ಕಡೆಗೆ ಏನಾಯ್ತು?ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನೇನಿದ್ದರೂ ರಾಮರಾಜ್ಯದ ಸಂಕಲ್ಪ

ದಿವ್ಯ ಭವ್ಯ ರಾಮಮಂದಿರದ ಸಂಕಲ್ಪ ಸಿದ್ಧಿಯಾಯ್ತು, ಇನ್ನೇನಿದ್ದರೂ ರಾಮರಾಜ್ಯದ ಸಂಕಲ್ಪ. ಸಮಸ್ತ ಭಾರತೀಯರು ಸಮರ್ಥ, ಸಕ್ಷಮ, ಸಮೃದ್ಧ, ವೈಭವಶಾಲಿ, ವಿಕಸಿತ ಭಾರತ ನಿರ್ಮಿಸುವ ಧೃಢ ಸಂಕಲ್ಪ ಮಾಡೋಣ. ಸನಾತನ ಭಾರತದ ಪರಮ ವೈಭವವನ್ನ ಮರುಸ್ಥಾಪಿಸಿ ಮತ್ತೊಮ್ಮೆ ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯೋಣ ಎಂದು ಆರ್. ಅಶೋಕ್ ಹೇಳಿದ್ದಾರೆ.

Exit mobile version