Site icon PowerTV

ತಮ್ಮ ನಿವಾಸದಲ್ಲಿ ‘ರಾಮ ಜ್ಯೋತಿ’ ಬೆಳಗಿಸಿದ ಪ್ರಧಾನಿ ಮೋದಿ

ನವದೆಹಲಿ : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಾಗೂ ಬಾಲ ರಾಮನ ಪ್ರಾಣ ಪ್ರತಿಷ್ಠೆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಗೆ ಹಿಂದಿರುಗಿದ್ದಾರೆ. ತಮ್ಮ ಅಧಿಕೃತ ನಿವಾಸದಲ್ಲಿ ಇಂದು ಸಂಜೆ ರಾಮನಿಜೆ ಜ್ಯೋತಿ ಬೆಳಗಿಸಿದ್ದಾರೆ.

ಈ ವೇಳೆ ಶ್ರೀರಾಮಚಂದ್ರನಿಗೆ ಪುಷ್ಪಾರ್ಚನೆ ಕೂಡ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಫೋಟೋಗಳನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ಈ ಶುಭ ಸಂದರ್ಭದಲ್ಲಿ ‘ರಾಮ ಜ್ಯೋತಿ’ಯನ್ನು ಬೆಳಗಿಸಲು ಮತ್ತು ರಾಮಲಲ್ಲಾನನ್ನು ಸ್ವಾಗತಿಸಲು ಪ್ರಧಾನಿ ಮೋದಿ ನಾಗರಿಕರಿಗೆ ಮನವಿ ಮಾಡಿದ್ದಾರೆ.

ಅಯೋಧ್ಯೆ ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನಿಮಿತ್ತ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಏರ್ಪಡಿಸಲಾದ ದೀಪೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಾಲ್ಗೊಂಡರು.

ಶತಮಾನಗಳ ಕನಸು, ಆಸೆ ಈಡೇರಿದೆ

ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯಾಗಿದೆ. ರಾಮಭಕ್ತರ ಶತಮಾನಗಳ ಕನಸು, ಆಸೆ ಇಂದು ಈಡೇರಿದೆ. ಶ್ರೀರಾಮ ಜನ್ಮಭೂಮಿ ಅಯೋಧ್ಯೆಗೂ, ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಶ್ರೀ ರಾಮನ ಪರಮಭಕ್ತ ಆಂಜನೇಯನ ಜನ್ಮಸ್ಥಳ ನಮ್ಮ ಕರುನಾಡಿನಲ್ಲೇ ಇರುವುದು ಹೆಮ್ಮೆಯ ವಿಚಾರ ಎಂದು ವಿಜಯೇಂದ್ರ ಹೇಳಿದ್ದಾರೆ.

Exit mobile version