Site icon PowerTV

ಧ್ರುವ ಸರ್ಜಾ ಮಕ್ಕಳಿಗೆ ‘ರುದ್ರಾಕ್ಷಿ ಹಾಗೂ ಹಯಗ್ರೀವ’ ಹೆಸರು ನಾಮಕರಣ

ಬೆಂಗಳೂರು : ಅಯೋಧ್ಯೆಯ ಬಾಲ ರಾಮನ ಪ್ರಾಣ ಪ್ರತಿಷ್ಠಾಪನಾ ದಿನವೇ ನಟ ಧ್ರುವ ಸರ್ಜಾ ಮಕ್ಕಳಿಬ್ಬರಿಗೂ ನಾಮಕರಣ ಮಹೋತ್ಸವ ಮಾಡಿದ್ದಾರೆ.

ಮಗಳಿಗೆ ರುದ್ರಾಕ್ಷಿ ಹಾಗೂ ಮಗನಿಗೆ ಹಯಗ್ರೀವ ಎಂದು ಹೆಸರಿಡಲಾಗಿದ್ದು, ನಾಮಕರಣ ಮಹೋತ್ಸವವನ್ನ ಕನಕಪುರದ ತಮ್ಮ ಫಾರಂ ಹೌಸ್ ನಲ್ಲಿ ನೆರವೇರಿಸಿದ್ದಾರೆ.‌

ಕುಟುಂಬಸ್ಥರು ಹಾಗೂ ಅತ್ಯಾಪ್ತರಿಗಷ್ಟೇ ಆಮಂತ್ರಣ ನೀಡಲಾಗಿದ್ದು, ಧ್ರುವ ಸರ್ಜಾ ಕುಡಿಗಳನ್ನ ಹರಿಸಲು ಬಾಲಿವುಡ್ ನಟ ಸಂಜಯ್ ದತ್, ನಿರ್ದೇಶಕ‌ ಜೋಗಿ ಪ್ರೇಮ್ ದಂಪತಿ, ನಿರ್ಮಾಪಕ ರಮೇಶ್ ರೆಡ್ಡಿ, ಸುಪ್ರೀತ್, ಅರ್ಜುನ್ ಸರ್ಜಾ ಬಂದಿರೋದು ವಿಶೇಷ.

ಆಂಜನೇಯನ ಭಕ್ತ ಧ್ರುವ ಸರ್ಜಾ

ಇನ್ನು ಮಗಳಿಗೆ ರುದ್ರಾಕ್ಷಿ ಧ್ರುವ ಸರ್ಜಾ ಹಾಗೂ ಮಗನಿಗೆ ಹಯಗ್ರಿವ ಧ್ರುವ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಧ್ರುವ ಸರ್ಜಾ ಅವರು ಆಂಜನೇಯನ ಭಕ್ತರು. ಹನುಮಂತನ ಕಂಡರೆ ಧ್ರುವ ಸರ್ಜಾ ಅವರಿಗೆ ಅಪಾರ ಭಕ್ತಿ. ಹೀಗಾಗಿ, ರಾಮ ಮಂದಿರದಲ್ಲಿನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ದಿನವೇ ನಾಮಕರಣ ಶಾಸ್ತ್ರ ನಡೆದಿದೆ.

Exit mobile version