Site icon PowerTV

ಸಮಯ ಸಿಕ್ಕಾಗ ಅಯೋಧ್ಯೆಗೂ ಹೋಗುತ್ತೇನೆ : ಸಿದ್ದರಾಮಯ್ಯ

ಬೆಂಗಳೂರು : ನಮ್ಮೂರಿನ ರಾಮ, ಅಯೋಧ್ಯೆಯ ರಾಮ, ಎಲ್ಲಾ ರಾಮನೂ ಒಂದೇ. ಸಮಯ ದೊರೆತಾಗ ಅಯೋಧ್ಯೆಗೂ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಮಮಂದಿರ ಉದ್ಘಾಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್ ಮಹಾತ್ಮ ಗಾಂಧಿ ಹೇಳಿದ ರಾಮಾಯಣದ ರಾಮನನ್ನು ಪೂಜಿಸುತ್ತದೆ. ಬಿಜೆಪಿ ಹೇಳಿದ ರಾಮನನ್ನು ಅಲ್ಲ ಎಂದು ಕುಟುಕಿದ್ದಾರೆ.

ಇಂದು ಶ್ರೀರಾಮ ಟೆಂಪಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶ್ರೀರಾಮನ ದೇವಸ್ಥಾನವನ್ನು ಇದರೊಂದಿಗೆ ಆಂಜನೇಯ ವಿಗ್ರಹವನ್ನೂ ಉದ್ಘಾಟಿಸಿದ್ದೇನೆ. ನಮ್ಮೂರಿನಲ್ಲಿ ನಾನೇ ಶ್ರೀರಾಮಚಂದ್ರನ ದೇವಸ್ಥಾನವನ್ನು ಕಟ್ಟಿಸಿದ್ದೇನೆ. ಇದನ್ನು ನಾವು ರಾಜಕಾರಣಕ್ಕಾಗಿ ಮಾಡಿರುವುದಲ್ಲ ಎಂದು ಬಿಜೆಪಿಗರಿಗೆ ಟಕ್ಕರ್ ಕೊಟ್ಟಿದ್ದಾರೆ.

Bಝಫ ರಾಮನ ಹೆಸರಲ್ಲಿ ರಾಜಕೀಯ ಮಾಡ್ತಿದೆ

ನಾವು ಮಹಾತ್ಮ ಗಾಂಧಿಯವರು ಹೇಳಿದ ರಾಮನ ಭಕ್ತರು. ಮಹಾತ್ಮ ಗಾಂಧೀಜಿಯವರು ರಘುಪತಿ ರಾಘವ ರಾಜಾರಾಮ್ ಎಂದು ಭಜಿಸುತ್ತಿದ್ದರು. ಗಾಂಧಿಯವರು ಸಾಯುವಾಗಲೂ ‘ಹೇ ರಾಮ್..’ ಎಂದೇ ಜೀವ ಬಿಟ್ಟರು. ಬಿಜೆಪಿ ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.

Exit mobile version