Site icon PowerTV

ಫೆ.4ರಂದು ಹಸೆಮಣೆ ಏರಬೇಕಿದ್ದ ಯುವತಿ ನೇಣಿಗೆ ಶರಣು

ಶಿವಮೊಗ್ಗ : ಹಸಮಣೆ ಏರಲು ಕೆಲವೇ ದಿನಗಳು ಬಾಕಿ ಇರುವಾಗ ಯುವತಿಯೊಬ್ಬಳು ದುಡುಕಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಲು ಗ್ರಾಮದಲ್ಲಿ ನಡೆದಿದೆ.

ಚೈತ್ರಾ (26) ಎಂಬುವವರೇ ಮೃತ ಯುವತಿ. ಈಕೆ ಎಂ.ಕಾಂ (M.Com) ಪದವೀಧರೆ. ಮನೆಯ ಸ್ನಾನದ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಮೃತ ಚೈತ್ರಾಳಿಗೆ ಫೆಬ್ರವರಿ 4ರಂದು ಮದುವೆ ನಿಗದಿಯಾಗಿತ್ತು. ಈಕೆ ಅನಾರೋಗ್ಯ ಕಾರಣ ನೀಡುತ್ತಾ ಮದುವೆ ತಿರಸ್ಕರಿಸುತ್ತಾ ಬಂದಿದ್ದಳು. ಪೋಷಕರ ಒತ್ತಾಯದ ಮೇರೆಗೆ ಈ ಮದುವೆಗೆ ಚೈತ್ರಾ ಒಪ್ಪಿಕೊಂಡಿದ್ದಳು. ಇದೀಗ, ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮದುವೆಗೆ ಕೇವಲ 13 ದಿನ ಬಾಕಿ

ಮದುವೆಗೆ 13 ದಿನ ಇರುವ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಪೋಷಕರು ಹಾಗೂ ವರನ ಕಡೆಯವರು ಆತಂಕಕ್ಕೊಳಗಾಗಿದ್ದಾರೆ. ಚೈತ್ರಾ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ಚೈತ್ರಾಳ ಮೃತದೇಹವನ್ನು ತೀರ್ಥಹಳ್ಳಿಯ ಶವಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version