Site icon PowerTV

ರಾಮಮಂದಿರ ಉದ್ಘಾಟನೆ; ರಾಮನ ಫೊಟೋ,ಪೋಸ್ಟರ್, ಬ್ಯಾನರ್ ಗಳ ಮಾರಾಟ ಜೋರು!

ಬೆಂಗಳೂರು: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಮಮಂದಿರದ ಉದ್ಘಾಟನೆ ಸಂಭ್ರಮ ನಗರದಲ್ಲೂ ಮನೆ ಮಾಡಿದೆ.ಎಲ್ಲೆಲ್ಲೂ ರಾಮನ ಹೆಸರಿನ ಪೋಸ್ಟರ್ ಹಾಗೂ ಬ್ಯಾನರ್ ಗಳಿಗೆ ಬೇಡಿಕೆಗಳು ಹೆಚ್ಚಾಗಿದ್ದು, ಭರ್ಜರಿ ಮಾರಾಟವಾಗುತ್ತಿವೆ.

ಹೌದು, ಕಳೆದ ಕೆಲವು ವಾರಗಳಿಂದ ರಾಮನ ಹೆಸರಿನ ಬ್ಯಾನರ್ ಹಾಗೂ ಪೋಸ್ಟರ್ ಗಳಿಗೆ ಬೇಡಿಕೆಗಳು ಹೆಚ್ಚಾಗಿದ್ದು, ಮಾರಾಟ ಶೇ.40-50ರಷ್ಟು ಹೆಚ್ಚಾಗಿದೆ ಎಂದು ಮಾರಾಟಗಾರರು ಹೇಳಿದ್ದಾರೆ.

ಇದನ್ನೂ ಓದಿ: ಬಾಹ್ಯಾಕಾಶದಿಂದ ರಾಮಮಂದಿರ ಕಂಡಿದ್ದು ಹೇಗೆ? ಇಸ್ರೋ ಫೋಟೊಗಳು ಇಲ್ಲಿವೆ

ಕೇಸರಿ ಧ್ವಜ,ರಾಮನ ಫೋಟೋಗಳು,ಶ್ರೀರಾಮನ ಸ್ಟಿಕ್ಕರ್‌ಗಳು, ದೇವಾಲಯದ ಚಿತ್ರಗಳು, ದೇವಾಲಯದ ಚಿತ್ರವಿರುವ ಟೀ ಶರ್ಟ್‌ಗಳು, ಪೋಸ್ಟರ್‌ಗಳು, ಬ್ಯಾನರ್‌ಗಳು ಮತ್ತು ರಾಮನಿಗೆ ಸಂಬಂಧಿಸಿದ ಇತರೆ ಸಾಮಾಗ್ರಿಗಳನ್ನು ಹಲವು ಜನರು ಖರೀದಿ ಮಾಡುತ್ತಿದ್ದಾರೆ.

 

 

 

Exit mobile version