Site icon PowerTV

ಡಿಕೆಶಿ ಅಪ್ಪ ಬಂದ್ರೂ ನನ್ನನ್ನು ಹತ್ತಿಕ್ಕಲು ಆಗಲ್ಲ: ರಮೇಶ್​ ಜಾರಕಿಹೊಳಿ

ಬೆಂಗಳೂರು: ಸಿದ್ದರಾಮಯ್ಯ ಒಳ್ಳೆಯ ಸಿಎಂ, ಆದ್ರೆ 2018ರಲ್ಲಿದ್ದಂತೆ ಈಗ ಇಲ್ಲ. ಕೊತ್ವಾಲ್‌ ಶಿಷ್ಯ ಡಿಸಿಎಂ ಆಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯಗೆ ಬೆಲೆ ಇಲ್ಲ. ಕೊತ್ವಾಲ್‌ ಶಿಷ್ಯ ಸಿಎಂ ಆಗಿದ್ದರೆ ನಮ್ಮ ಆಸ್ತಿ ಎಲ್ಲಾ ಅವರ ಹೆಸರಿಗೆ ಆಗ್ತಿತ್ತು ಎಂದು ಮಾಜಿ ಸಚಿವ ರಮೇಶ್ ಜಾರಕಿಹೋಳಿ ಡಿಕೆ ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಗೋದ್ರಾ ದುರಂತದಲ್ಲಿ ಸಾವಿಗೀಡಾದ 19 ಕುಟುಂಬಗಳಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ!

ಬೆಳಗಾವಿಯಲ್ಲಿ ಮಾತನಾಡಿದ ಅವರು, ದೇವರು ದೊಡ್ಡವನು ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಆಗಿದ್ದಾರೆ. ಕೊತ್ವಾಲ್‌ ಶಿಷ್ಯ ನನ್ನ ವಿರುದ್ಧ 420 ಕೇಸ್ ಹಾಕಿಸಿದ್ದಾರೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೆಸರು ಹೇಳದೇ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿಡಿ ಪ್ರಕರಣದಲ್ಲಿ ನನಗೆ ಶಿಕ್ಷೆ ಮಾಡಿಸಬೇಕು ಅಂದುಕೊಂಡಿದ್ದ ಆದರೆ ಆಗಲಿಲ್ಲ. ಸಿಡಿ ಪ್ರಕರಣದಲ್ಲಿ ವಿಫಲನಾಗಿ ಈಗ 420 ಕೇಸ್ ದಾಖಲು ಮಾಡಿಸಿ ಮಾಧ್ಯಮಗಳಲ್ಲಿ ನನ್ನ ಹೆಸರು ನೋಡಿ ಸಮಾಧಾನ ಮಾಡಿಕೊಳ್ಳುತ್ತಿದ್ದಾನೆ. ಡಿ.ಕೆ.ಶಿವಕುಮಾರ್‌ರವರ ಅಪ್ಪ ಬಂದ್ರೂ ನನ್ನನ್ನು ಹತ್ತಿಕ್ಕಲು ಆಗಲ್ಲ ಎಂದು ಮತ್ತೆ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Exit mobile version