Site icon PowerTV

ನಾನು ರಾಮ ಮಂದಿರಕ್ಕೆ ಹೋಗಲ್ಲ ಬದಲಿಗೆ ಅಣ್ಣಮ್ಮ,ಮಾರಮ್ಮನ ಪೂಜೆ ಮಾಡ್ತೀನಿ: ಬಿಕೆ ಹರಿಪ್ರಸಾದ್

ಬೆಂಗಳೂರು: ರಾಮಮಂದಿರಕ್ಕೆ ಹೋಗಲ್ಲ. ನಾವು ಅಣ್ಣಮ್ಮ, ಮಾರಮ್ಮ, ಭೂತ ಪೂಜೆ ಮಾಡುವವರು. ಅಲ್ಲಿಗೆ ಹೋಗ್ತೀವಿ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಜಗದ್ಗುರು ಇಲ್ಲ. ಅಲ್ಲಿರೋದು ವಿಶ್ವಗುರು. ವಿಶ್ವಗುರು ಏನೆಂದು ದೇಶಕ್ಕೆ ಗೊತ್ತು. ನಾವು ಚಿಕ್ಕವರಿದ್ದಾಗ ಶಂಕರಾಚಾರ್ಯರು ಹಿಂದೂ ಧರ್ಮದ ಮುಖ್ಯಸ್ಥರು ಎಂದು ಹೇಳಿಕೊಟ್ಟಿದ್ದಾರೆ. ಆದರೆ, ಶಂಕರರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡಿದ್ದರೆ ಅದು ಧಾರ್ಮಿಕ ಕಾರ್ಯಕ್ರಮ ಆಗುತ್ತಿತ್ತು. ಆಗ ಯಾವ ಆಮಂತ್ರಣ ಏನೂ ಬೇಕಿರಲಿಲ್ಲ, ನಾವು ಹೋಗುತ್ತಿದ್ದೆವು. ಆದರೆ ಅಲ್ಲಿ ಜಗದ್ಗುರು ಬದಲು ವಿಶ್ವಗುರು ಇದ್ದಾರೆ. ಅಂದರೆ ಅದು ಬಿಜೆಪಿ ಕಾರ್ಯಕ್ರಮ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: 23 ಕುರಿಗಳ ಕಳ್ಳತನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ನಾಳೆ ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಟೆ ಕಾರ್ಯಕ್ರಮ ನಡೆಯಲಿದ್ದು ಈಗಾಗಲೇ ದೇಶದ ಹಲವು ವಿಐಪಿ ಗಳಿಗೆ ಪೂಜಾಕಾರ್ಯದಲ್ಲಿ ಭಾಗವಹಿಸಲು ಟ್ರಸ್ಟ್​ ವತಿಯಿಂದ ಆಮಂತ್ರಣ ನೀಡಲಾಗಿದೆ.

Exit mobile version