ಬೆಂಗಳೂರು : ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪಟ್ಟಣದ ಬಸ್ ನಿಲ್ದಾಣದ ಬಳಿ ಅಳವಡಿಸಿದ್ದ ರಾಮನ ಫ್ಲೆಕ್ಸ್ ಅನ್ನು ಕಿಡಿಗೇಡಿಗಳು ಹರಿದಿರುವುದಕ್ಕೆ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಗುಲಾಮರು ಮತ್ತು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರುಗಳ ಬ್ರದರ್ಸ್ ಶಾಂತಿಯನ್ನು ಕದಡಿ ರಾಮ ಭಕ್ತರನ್ನು ಪದೇ ಪದೆ ಕೆಣುಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಪೊಲೀಸರು ಚಿಕ್ಕಬಳ್ಳಾಪುರದಲ್ಲಿ ಶಾಂತಿ ಸಭೆ ನಡೆಸಿದ ದಿನವೇ ಕಿಡಿಗೇಡಿಗಳು ಇಂಥ ನೀಚ ಕೃತ್ಯ ವೆಸಗಿದ್ದಾರೆ. ಇದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ. ಕೋಲಾರದಲ್ಲಿ ಫ್ಲೆಕ್ಸ್ ಹರಿದ ಪ್ರಕರಣ ಮಾಸುವ ಮುನ್ನವೇ ಈ ಘಟನೆ ನಡೆದಿದೆ ಎಂದು ಛೇಡಿಸಿದೆ.
ಗೋಧ್ರಾ ಘಟನೆಗೆ ಮುನ್ನುಡಿ ಇಟ್ಟಂತಿದೆ
ಕಾಂಗ್ರೆಸ್ ಸರ್ಕಾರ ಈ ಮೂಲಕ ರಾಜ್ಯದಲ್ಲಿ ಗೋಧ್ರಾದಂತಹ ಘಟನೆಗೆ ಮುನ್ನುಡಿ ಇಟ್ಟಂತಿದೆ. ಇನ್ನು ಮುಂದೆ ಇಂತಹ ಯಾವುದೇ ಘಟನೆ ಅಥವಾ ಹಿಂದೂಗಳ ಭಾವನೆಗೆ ದಕ್ಕೆ ತರುವ ಕೃತ್ಯಗಳು ನಡೆದರೆ, ಕಾಂಗ್ರೆಸ್ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಬಿಜೆಪಿ ಎಚ್ಚರಿಕೆಯ ಸಂದೇಶ ರವಾನಿಸಿದೆ.



Pinco canlı kazino çox real hiss yaradır. Oyunçular arasında ən çox seçilən platforma pinko az. Pinco betdə canlı oyunlara baxmaq mümkündür.
Pinco oyunları yüksək keyfiyyətlidir.