Site icon PowerTV

ರಾಮ ಮಂದಿರ ಉದ್ಘಾಟನೆಗೆ ನಾನು ಹೋಗಲ್ಲ: ಜಗದೀಶ ಶೆಟ್ಟರ್​

ಕಲಬುರಗಿ: ನಾನು ರಾಮ ಮಂದಿರ ಉದ್ಘಾಟನೆಗೆ ನಾನು ಹೋಗಲ್ಲ ನನಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಹೀಗಾಗಿ ನಾನು ಹೋಗುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು ನಾನು ಕೂಡ ರಾಮ ಭಕ್ತ. ರಾಮ ಮಂದಿರ ಕಟ್ಟಲು ಹಣ ಕೂಡಿಸಿಕೊಡಲು ಹೇಳಿದ್ದಾಗ 2 ಕೋಟಿ ಹಣ ಕೂಡಿಸಿ ಕೊಟ್ಟಿದ್ದೇನೆ. ಆದರೆ, ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ಬಂದಿಲ್ಲ. ಹೀಗಾಗಿ ನಾನು ಹೋಗುವುದಿಲ್ಲ ಎಂದರು.

ಮಂದಿರ ನಿರ್ಮಾಣ ಆಗಿರುವುದು ಖುಷಿ ವಿಚಾರ. ರಾಮ ಮಂದಿರ ಅನ್ನೋದು ಧಾರ್ಮಿಕತೆ ಮತ್ತು ಧರ್ಮದ ಸಂಕೇತ. ಧರ್ಮ ಜಾಗೃತಿ ಮೂಡಿಸಲು ಮತ್ತು ದೇಶ ಒಂದುಗೂಡಿಸಲು ಇರುವಂತದ್ದು. ಆದರೆ, ಶ್ರೀರಾಮ ಮಂದಿರ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ರಾಜಕಾರಣದಲ್ಲಿ ಧರ್ಮ ಇರಬೇಕೆ ಹೊರೆತು, ಧರ್ಮದಲ್ಲಿ ರಾಜಕಾರಣ ಬರಬಾರದು. ಸದ್ಯಕ್ಕೆ ಅಯೋಧೆಗೆ ಹೋಗಲ್ಲ. ಆದರೆ, ಮುಂದಿನ ದಿನಗಳಲ್ಲಿ ಹೋಗಿ ಶ್ರೀರಾಮನ ದರ್ಶನ ಪಡೆಯುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಹಿಂದೂ ವಿರೋಧಿ ಅಲ್ಲ

ಕಾಂಗ್ರೆಸ್ ಹಿಂದೂ ವಿರೋಧಿ ಅಲ್ಲ. ಹಿಂದೂ ವಿರೋಧಿ ಇದ್ದರೆ 135 ಸೀಟ್ ಹೇಗೆ ಬರುತ್ತಿದ್ದವು? ಆಹ್ವಾನ ಬಂದವರು ಹೋಗೊದು ಬಿಡೋದು ಅವರಿಗೆ ಬಿಟ್ಟ ವಿಚಾರ. ಹೋಗಲ್ಲ ಅನ್ನೋ ಕಾರಣಕ್ಕೆ ಕಾಂಗ್ರೆಸ್ ಬಗ್ಗೆ ಟೀಕೆ ಟಿಪ್ಪಣೆ ಮಾಡುವುದು ಸರಿಯಲ್ಲ. ಈ ರೀತಿ ಟೀಕೆ ಮಾಡುವುದನ್ನು ಬಿಜೆಪಿಯವರು ಬಿಟ್ಟುಬಿಡಬೇಕು ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಬಿಜೆಪಿಗೆ ಮತ್ತೆ ಮರಳುವ ಪ್ರಶ್ನೆಯೇ ಇಲ್ಲ 

ಬಿಜೆಪಿಗೆ ಮರಳುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ, ನಾನು ಅಧಿಕಾರದ ಆಸೆ ಇಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಹೋಗಿಲ್ಲ. ನನಗೆ ಸದ್ಯ ಸಮಾಧಾನವಿದೆ. ಆಗ ನನಗೆ ಅಪಮಾನ ಆಗಿತ್ತು. ಅವರಿಗೆ ಪಾಠ ಕಲಿಸಬೇಕಿತ್ತು, ಕಲಿಸಿದ್ದೇನೆ.

ನಾನು ಲೋಕಸಭೆ ಚುನಾವಣೆ ಆಕಾಂಕ್ಷಿಯೂ ಅಲ್ಲ

ನಾನು ಲೋಕಸಭೆ ಚುನಾವಣೆಗೆ ನಿಲ್ಲಲ್ಲ ಅಂತಾ ಹಲವು ಬಾರಿ ಹೇಳಿದ್ದೇನೆ. ನಾನು ಲೋಕಸಭೆ ಚುನಾವಣೆ ಆಕಾಂಕ್ಷಿಯೂ ಅಲ್ಲ, ನನಗೆ ಯಾರು ಸಂಪರ್ಕ ಮಾಡಿಲ್ಲ. ನಾನು ವಾಪಸ್ ಬಿಜೆಪಿಗೆ ಹೋಗುವ ಪ್ರಶ್ನೆಯೂ ಇಲ್ಲ ಎಂದು ಹೇಳಿದರು.

 

Exit mobile version