Site icon PowerTV

ಸಂಸದೆ ಸುಮಲತಾ ಅಂಬರೀಶ್​ಗೆ ಗೌರವ ಡಾಕ್ಟರೇಟ್

ಬೆಂಗಳೂರು : ಮಂಡ್ಯ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಶ್ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ. ಸಮಾಜ ಸೇವೆ ಮತ್ತು ರಾಜಕೀಯ ಮತ್ತು ಚಲನಚಿತ್ರಗಳಲ್ಲಿ ಸೇವೆಗಾಗಿ ಈ ಗೌರವ ಸಂದಿದೆ.

USA, ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಿಂದ ಅನುಮೋದಿಸಲಾದ ಮತ್ತು ಮಾನ್ಯತೆ ಪಡೆದಿರುವ ಯುನೈಟೆಡ್ ಥಿಯೋಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಹೈದರಾಬಾದ್‌ನಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂಸದೆ ಸುಮಲತಾ ಮಾಹಿತಿ ಹಂಚಿಕೊಂಡಿದ್ದಾರೆ. ಗೌರವ ಡಾಕ್ಟರೇಟ್ ಪಡೆದಿರುವುದಕ್ಕೆ ಅತ್ಯಂತ ವಿನಮ್ರ ಮತ್ತು ಗೌರವ ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಅಂಬರೀಶ್​ಗೆ ಗೌಡಾ ಅರ್ಪಣೆ

ಈ ಗೌರವ ನನ್ನ ಮುಂದಿನ ಹಾದಿಯಲ್ಲಿ ನನ್ನನ್ನು ಪ್ರೇರೇಪಿಸಲು ಇದು ಸ್ಫೂರ್ತಿಯಾಗಲಿದೆ. ನಾನು ಈ ಗೌರವವನ್ನು ನನ್ನ ಪತಿ ಅಂಬರೀಶ್, ನನ್ನ ಹೆತ್ತವರು ಮತ್ತು ನನ್ನ ಹಿತೈಷಿಗಳು ಮತ್ತು ಚಲನಚಿತ್ರ ಮತ್ತು ರಾಜಕೀಯ ಉದ್ಯಮದ ಬೆಂಬಲಿಗರಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಇಂಥದ್ದೊಂದು ಗೌರವ ಸಿಕ್ಕಿರುವುದು ನನ್ನ ಮೇಲಿನ ನಂಬಿಕೆ ಮತ್ತು ನಿಮ್ಮೆಲ್ಲರ ಆಶೀರ್ವಾದ ಕಾರಣ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಸುಮಲತಾ ಅಂಬರೀಶ್ ಪೋಸ್ಟ್​ ಮಾಡಿದ್ದಾರೆ.

Exit mobile version