Site icon PowerTV

ಶ್ರೀರಾಮ ಮಂದಿರಕ್ಕೆ 400 ಕೆಜಿ ತೂಕದ ಬೀಗ ಉಡುಗೊರೆ 

ಅಯೋಧ್ಯೆ: ರಾಮಮಂದಿರ ಲೋಕಾರ್ಪಣೆಗೆ ಇನ್ನೂ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದು,ಶ್ರೀರಾಮನಿಗೆ ರಾಮ ಭಕ್ತರಿಗೆ ಉಡುಗೊರೆಯ ಮಹಾಪೂರವೇ ಹರಿದು ಬರುತ್ತಿದೆ.

ಹೌದು, ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿಯಾಗುತ್ತಿರುವ ರಾಮಮಂದಿರ ಎಲ್ಲರ ಗಮನ ಸಳೆಯುತ್ತಿದೆ.  ಅಯೋಧ್ಯೆಯ ಭವ್ಯ ಮಂದಿರಕ್ಕೆ 400 ಕೆಜಿ ತೂಕದ ವಿಶ್ವದ ಅತಿದೊಡ್ಡ ಬೀಗ ಅಯೋಧ್ಯೆಗೆ ರವಾನೆ ಆಗಿದೆ. ಅಲಿಗಢದಲ್ಲಿ ನೊರಂಗಾಬಾದ್ ನಿವಾಸಿ, ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಮಹಾಮಂಡಲೇಶ್ವರ ಅನ್ನಪೂರ್ಣ ಭಾರತಿ ಪುರಿ ಈ ಬೀಗಕ್ಕೆ ವಿಧಿವಿಧಾನದಂತೆ ಪೂಜೆ ಸಲ್ಲಿಸಿದ್ದಾರೆ.

ಇನ್ನು ಎರಡು ವರ್ಷಗಳ ಹಿಂದೆ ಈ ಬೀಗವನ್ನು ಸತ್ಯ ಪ್ರಕಾಶ್ ಶರ್ಮಾ ಮತ್ತು ಅವರ ಪತ್ನಿ ರುಕ್ಮಿಣಿ ಶರ್ಮಾ ಎಂಬ ವೃದ್ಧ ದಂಪತಿ ತಯಾರಿಸಿದ್ದಾರೆ. ಸದ್ಯ ಈ ಬೀಗವನ್ನು ನೋಡಲು ಜನರು ಜಮಾಯಿಸಿ,ಬಳಿಕ ಜೈ ಶ್ರೀ ರಾಮ್ ಘೋಷಣೆ ಕೂಗಿದರು.

Exit mobile version