Site icon PowerTV

ಧೋನಿ ಅಪ್ಪಟ ಅಭಿಮಾನಿ ಆತ್ಮಹತ್ಯೆಗೆ ಶರಣು

ಚೆನ್ನೈ : ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಪ್ಪಟ ಅಭಿಮಾನಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ತಮಿಳುನಾಡಿನ ಕುಡ್ಡಲೂರು ಜಿಲ್ಲೆಯ ತಿತ್ತಕುಡಿ ನಿವಾಸಿಯಾಗಿರುವ ಕೃಷ್ಣನ್‌ ಅವರೇ ಆತ್ಮಹತ್ಯೆಗೆ ಶರಣಾದ ಅಭಿಮಾನಿ. ಆರ್ಥಿಕ ಸಂಕಷ್ಟವೇ ಆತ್ಮಹತ್ಯಗೆ ಕಾರಣ ಎಂದು ತಿಳಿದುಬಂದಿದೆ. ಕೃಷ್ಣನ್ ಅವರು ಧೋನಿ ಹಾಗೂ ಸಿಎಸ್​ಕೆ ತಂಡದ ದೊಡ್ಡ ಅಭಿಮಾನಿಯಾಗಿದ್ದರು.

ಮೃತ ಕೃಷ್ಣನ್ 2020ರಲ್ಲಿ ತಮ್ಮ ಮನೆಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬಣ್ಣದ ಪೇಂಟ್‌ ಮಾಡಿಸಿದ್ದರು. ಅಲ್ಲದೆ, ಮನೆಗೆ ‘ಹೋಂ ಆಫ್‌ ಧೋನಿ ಫ್ಯಾನ್’ (ಧೋನಿ ಅಭಿಮಾನಿಯ ಮನೆ) ಎಂಬ ಹೆಸರನ್ನಿಟ್ಟಿದ್ದರು. ಸಿಎಸ್‌ಕೆ ಲಾಂಛನ ಹಾಗೂ ಧೋನಿ ಅವರ ಚಿತ್ರ ಕೂಡ ಮೂಡಿಸಿದ್ದರು. ಇದಕ್ಕಾಗಿ ಅವರು ರೂ 1.5 ಲಕ್ಷ ರೂ. ಖರ್ಚು ಮಾಡಿದ್ದರು. ಕೃಷ್ಣನ್‌ ಅಭಿಮಾನವನ್ನು ಸ್ವತಃ ಧೋನಿ ಕೊಂಡಾಡಿದ್ದರು.

ಆತ್ಮಹತ್ಯೆಗೆ ಕಾರಣ ಏನು?

ಮೃತ ಕೃಷ್ಣನ್ ದುಬೈಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಊರಿಗೆ ವಾಪಸಾಗಿದ್ದರು. ದುಬೈಯಲ್ಲಿ ಜರ್ಮನ್‌ ಟ್ರೇಡಿಂಗ್‌ ಕಂಪನಿಯೊಂದರಲ್ಲಿ ಅವರು ಮಾರ್ಕೆಟ್‌ ಅನಾಲಿಸ್ಟ್‌ ಆಗಿದ್ದರು. ಆದರೆ, ಸ್ವದೇಶಕ್ಕೆ ವಾಪಾಸಾದ ಬಳಿಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು. ಇದಕ್ಕಾಗಿ ಸಾಲ ಪಡೆದಿದ್ದರು. ಬಳಿಕ, ತೀವ್ರ ನಷ್ಟಕ್ಕೊಳಗಾಗಿ ಕೃಷ್ಣನ್ ಸಂಕಷ್ಟಕ್ಕೆ ಒಳಗಾಗಿದ್ದರು. ಇದೀಗ ಆತ್ಮಹತ್ಯಗೆ ಶರಣಾಗಿದ್ದಾರೆ.

Exit mobile version