Site icon PowerTV

ಸಿದ್ದರಾಮಯ್ಯ ‘ಕನಸುಗಾರ ಅಲ್ಲ, ನನಸು ಮಾಡುವ ಕೆಲಸಗಾರ’

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಕನಸುಗಾರ ಮಾತ್ರವಲ್ಲ, ಕನಸುಗಳನ್ನು ನನಸು ಮಾಡುವ ಸಾಮರ್ಥ್ಯ ಮತ್ತು ಬದ್ಧತೆ ಇರುವ ಕೆಲಸಗಾರರು ಹೌದು.

ಮುಖ್ಯಮಂತ್ರಿಗಳ ಅಧಿಕೃತ ಎಕ್ಸ್​ ಖಾತೆಯಲ್ಲಿ ಈ ರೀತಿ ಪೋಸ್ಟ್ ಮಾಡಲಾಗಿದೆ. ಯುವನಿಧಿಯ ಮೂಲಕ ಸಶಕ್ತ ಯುವಸಮುದಾಯದ ಕನಸು ನನಸಾಗಿದೆ ಎಂದು ಟ್ವೀಟ್ ಮಾಡಲಾಗಿದೆ.

ಮೊದಲ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ, ಕರ್ನಾಟಕದ ಬಗ್ಗೆ ತಾನು ಕಂಡ ಕನಸುಗಳನ್ನು ಕರ್ನಾಟಕದ ಮಹಾಜನತೆಯ ಜೊತೆ ಹಂಚಿಕೊಂಡಿದ್ದರು. ಅದು ಹಸಿವು, ಅನಾರೋಗ್ಯ, ಅನಕ್ಷರಸ್ಥತೆ, ನಿರುದ್ಯೋಗ ಮತ್ತು ಗುಡಿಸಲು ಮುಕ್ತ ಕರ್ನಾಟಕ ನಿರ್ಮಾಣದ ಕನಸು.

ಕರ್ನಾಟಕ ಅಭಿವೃದ್ದಿ ಮೂಲಮಂತ್ರ

5 ಉಚಿತ ಗ್ಯಾರಂಟಿ ಯೋಜನೆಗಳು ಸಿದ್ದರಾಮಯ್ಯರ ಕನಸುಗಳನ್ನು ನನಸು ಮಾಡುವ ಹೊಸ ಸಾಧನ. ಸರ್ಕಾರದ ಪ್ರತಿಯೊಂದು ಯೋಜನೆಗಳ ಹಿಂದೆ ಸಿದ್ದರಾಮಯ್ಯನವರ ಬದುಕಿನ ಅನುಭವಗಳಿವೆ. ಸಾಮಾಜಿಕ ನ್ಯಾಯದೊಂದಿಗೆ ಅಭಿವೃದ್ಧಿ ಎನ್ನುವುದು ಅವರ ಕನಸಿನ ಕರ್ನಾಟಕ ಅಭಿವೃದ್ದಿಯ ಮಾದರಿಯ ಮೂಲಮಂತ್ರ. ಈ ಅಭಿವೃದ್ದಿಯ ಕೇಂದ್ರದಲ್ಲಿರುವುದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ. ನಾಡು ಮತ್ತು ನುಡಿ ಬಗೆಗಿನ ಅವರ ಪ್ರೀತಿ, ಕಾಳಜಿ ಮತ್ತು  ಬದ್ಧತೆ ಪ್ರಶ್ನಾತೀತ.

ಅಭಿವೃದ್ದಿ ಬಂಡಿಗೆ ಸಿದ್ದರಾಮಯ್ಯ ಚಾಲನೆ

ಮೊದಲ ಅವಧಿಯಲ್ಲಿ ನೆಟ್ಟ ಯೋಜನೆಗಳ ಸಸಿಗಳು ಇಂದು ಬೇರು ಬಿಟ್ಟು ಮರಗಳಾಗಿ ಬೆಳೆದು ಆಸರೆ ನೀಡುತ್ತಿವೆ. ಈಗ ಹೊಸ ಕನಸುಗಳ ಸಸಿಗಳನ್ನು ನೆಡುವ ಕಾಲ. ಕರ್ನಾಟಕ ಇಂದು ಸಮೃದ್ದ, ಸ್ವಾವಲಂಬಿ, ಸ್ವಾಭಿಮಾನಿ ಮತ್ತು ಸೌಹಾರ್ದತೆಯ ನಾಡಾಗಿ ದೇಶದ ಗಮನಸೆಳೆಯುತ್ತಿದೆ. ರಾಜಕೀಯ ಬದಲಾವಣೆಗಳ ಕಾರಣದಿಂದ ಹಿನ್ನಡೆಗೆ ಸರಿದಿದ್ದ ಅಭಿವೃದ್ದಿಯ ಬಂಡಿಗೆ ಮುಖ್ಯಮಂತ್ರಿಗಳು ಮತ್ತೆ ಚಾಲನೆ ನೀಡಿದ್ದಾರೆ ಎಂದು ಪೋಸ್ಟ್ ಮಾಡಲಾಗಿದೆ.

Exit mobile version