Site icon PowerTV

ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ಹೊರಬನ್ನಿ: ಸಿ.ಟಿ ರವಿ

ಬೆಂಗಳೂರು: ಅಯೋಧ್ಯೆ ವಿಚಾರವಾಗಿ ಕಾಂಗ್ರೆಸ್​​ ತೆಗೆದುಕೊಂಡ ನಿಲುವು ವಿರೋಧಿಸಿ ಗುಜರಾತ್​​ ಕಾಂಗ್ರೆಸ್​ ಶಾಸಕ ಚಾವಡ ಕಾಂಗ್ರೆಸ್​​ಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್​​ನ ಬಾಬರ್​ ಕೃತ್ಯ ವಿರೋಧಿಸಿ ರಾಜೀನಾಮೆ ನೀಡಲು ಇದು ಸಕಾಲ ಎಂದು ಬಿಜೆಪಿ ಮಾಜಿ ಶಾಸಕ C.T.ರವಿ ಕರೆ ನೀಡಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ವಿಭೀಷಣ ರಾವಣನ‌ ಸಹೋದರನಾಗಿದ್ರೂ ಸಹ, ರಾವಣನ ಸೀತೆ ಬಗ್ಗೆ ತಳೆದ ನಿಲುವನ್ನು ವಿರೋಧಿಸಿ ರಾವಣನಿಂದ ದೂರವಾಗಿ ರಾಮನ ಪಂಗಡ ಸೇರಿಕೊಂಡ. ಬಳಿಕ ರಾವಣನ ವಿರುದ್ಧವೇ ಹೋರಾಟ ನಡೆಸಿದ. ಅಂತೆಯೇ ಕಾಂಗ್ರೆಸ್​ ಶಾಸಕ ಕಾಂಗ್ರೆಸ್​​ ತೊರೆದಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಡೀಪ್ ಫೇಕ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವನ ಬಂಧನ!

ಅಯೋಧ್ಯೆ ವಿಚಾರದಲ್ಲಿ ಕಾಂಗ್ರೆಸ್ ಸಣ್ಣ ರಾಜಕಾರಣ ನಡೆಸುತ್ತಿದೆ. ಒಬ್ಬ ಸಚಿವ ರಾಮನನ್ನು ಗೊಂಬೆಗೆ ಹೋಲಿಸ್ತಾನೆ, ಮತ್ತೊಬ್ಬ ಸಚಿವ ನಾನ್ಯಾಕೆ ಹಣ ಕೊಡಬೇಕು ಅಂತಾನೆ. ರಾಮಮಂದಿರ ಉದ್ಘಾಟನೆಗೆ ಆಮಂತ್ರಣ ಬಂದ ಬಳಿಕವೂ ಕಾಂಗ್ರೆಸ್‌ ತೆಗೆದುಕೊಂಡ ನಿಲುವು ಸರಿಯಿಲ್ಲ. ಅದನ್ನ ಖಂಡಿಸಿ ರಾಜೀನಾಮೆ ನೀಡಿ‌ ಹೊರಗೆ ಬನ್ನಿ ಎಂದು ಕಾಂಗ್ರೆಸ್ ಹಿಂದುತ್ವ ನಾಯಕರಿಗೆ ಕರೆ ನೀಡಿದ್ದಾರೆ.

Exit mobile version