Site icon PowerTV

ವೃದ್ಧಾಶ್ರಮಕ್ಕೆ ನಮ್ರತಾ ಪೋಷಕರು ಸಹಾಯ ಹಸ್ತ; ವೋಟ್‌ಗೋಸ್ಕರ ಡ್ರಾಮ ಅಂದ್ರು ಫ್ಯಾನ್ಸ್

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಈಗಾಗಲೇ ಫಿನಾಲೆ ಹಂತಕ್ಕೆ ಬಂದು ತಲುಪಲಿದೆ.  ಮನೆಯಿಂದ ನಮ್ರತಾ ಮತ್ತು ತುಕಾಲಿ ಹೊರಗೆ ಬರುವ ಎಲ್ಲಾ ಸಾಧ್ಯತೆಗಳು ಇದೆ ಎನ್ನಲಾಗುತ್ತಿದೆ. ಇದೀಗ ದಿಢೀರನೆ ವೋಟ್‌ಗಾಗಿ ನಮ್ರತಾ ಗೌಡ ಫ್ಯಾಮಿಲಿ ಜನಸೇವೆಗೆ ನಿಂತಿದ್ದಾರೆ ಎಂಬ ಟೀಕೆಗಳು ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.

ಹೌದು,ʻಜನಸ್ನೇಹಿʼ ಆಶ್ರಮಕ್ಕೆ ನಮ್ರತಾ ಗೌಡ ಅವರ ಅಪ್ಪ-ಅಮ್ಮ ಭೇಟಿ ನೀಡಿ ಒಂದು ಹೊತ್ತಿನ ಊಟಕ್ಕೆ ಬೇಕಾದ ಸಹಾಯವನ್ನು ಮಾಡಿ ಬಂದಿದ್ದಾರೆ. ಆಶ್ರಮಕ್ಕೆ ಭೇಟಿ ಕೊಟ್ಟ ನಮ್ರತಾ ಅಪ್ಪ-ಅಮ್ಮ, ಅಲ್ಲಿರುವ ದೇವರಿಗೆ ಪೂಜೆ ಮಾಡಿದ್ದಾರೆ. ಬಳಿಕ ಆಶ್ರಮದಲ್ಲಿರುವ ಎಲ್ಲಾ ಹಿರಿಯರನ್ನು ಮಾತನಾಡಿಸಿ, ಅವರಿಂದ ಆಶೀರ್ವಾದ ಪಡೆದಿದ್ದಾರೆ.

ಆಶ್ರಮದಲ್ಲಿ ದೊಡ್ಡ ಬ್ಯಾನರ್ ಒಂದನ್ನು ಹಿಡಿದುಕೊಂಡು ನಮ್ರತಾಗೆ ಸಪೋರ್ಟ್ ಮಾಡಿದ್ದಾರೆ. ನಮ್ರತಾ ಅಭಿಮಾನಿ ಬಳಗದಿಂದ ಅನ್ನ ದಾಸೋಹ ಎಂಬ ಬ್ಯಾನರ್ ಹಾಕಿದ್ದಾರೆ‌. ಈ ಫೋಟೊಗಳು ಸೋಷಿಯಲ್‌ ಮೀಡಯಾದಲ್ಲಿ ವೈರಲ್‌ ಆಗಿದೆ.

ಇದೀಗ ಈ ಫೋಟೊ ಹಾಗೂ ವಿಡಿಯೊ ಕಂಡು ನೆಟ್ಟಿಗರು ʻವೋಟ್‌ಗಾಗಿ ಇದೆಲ್ಲ ಗಿಮಿಕ್‌, ಇದೆಲ್ಲ ಡ್ರಾಮಾʼ ಎಂದು ಕಮೆಂಟ್‌ ಮಾಡಿದ್ದಾರೆ. ʻವಿನ್‌ ಆಗಬೇಕು ಅಂತ ಏನೆಲ್ಲ ಮಾಡ್ತಾರಪ್ಪʼ ! ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ʻವೋಟ್ ಬೇಕು ಎಂದು ಈ ಸಾಹಸ, ಈಗ ಆಶ್ರಮಗಳು ನೆನಪು ಆಗಿದೆʼʼಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ಈ ವಾರ ನಮ್ರತಾ ನಾಮಿನೇಟ್‌ ಕೂಡ ಆಗಿದ್ದಾರೆ.

 

 

Exit mobile version