Site icon PowerTV

ಅಯೋಧ್ಯೆ ರಾಮನಿಗಾಗಿ ನಟಿ ರೂಪಿಕಾ ರಿಂದ ವಿಶೇಷ ಆಲ್ಬಂ ಸಾಂಗ್​!

ಬೆಂಗಳೂರು: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಈ ಸುಸಂದರ್ಭದಲ್ಲಿ ನಟಿ ರೂಪಿಕಾ ಶ್ರೀರಾಮನ ಕುರಿತ ವಿಶೇಷ ಆಲ್ಬಂ ಗೀತೆ ಮಾಡಿದ್ದಾರೆ.

ನೀತು ನಿನಾದ್ ಸಂಗೀತ ನಿರ್ದೇಶಿಸಿ, ಹಾಡಿರೋ ಹಾಡಿಗೆ ನಟಿ ರೂಪಿಕಾ ನೃತ್ಯ ಸಂಯೋಜನೆಯ ಜೊತೆ ಕ್ರಿಯೇಟಿವ್ ಹೆಡ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಕ್ಲಾಸಿಕಲ್ ಡ್ಯಾನ್ಸರ್ ಹಾಗೂ ಶಬರಿ ಎರಡು ಶೇಡ್ ಗಳಲ್ಲಿ ಕಾಣಲಿರೋ ರೂಪಿಕಾ ಜೊತೆ ನಟ ಅನಿರುದ್ದ್, ನಿರಂಜನ್ ದೇಶ್ ಪಾಂಡೆ ಹಾಗೂ ಅಕ್ಷಯ್ ಕಾಣಸಿಗಲಿದ್ದಾರೆ.

ಇದನ್ನೂ ಓದಿ: ನೂತನ ಬೋಯಿಂಗ್ ವಿಮಾನ ತಯಾರಿಕಾ ಸಂಸ್ಥೆಯ ಕ್ಯಾಂಪಸ್ ಗೆ ಮೋದಿ ಚಾಲನೆ!

ಸಿರಿ ಮ್ಯೂಸಿಕ್ ಚಿಕ್ಕಣ್ಣ ನಿರ್ಮಾಣದ ಈ ಹಾಡನ್ನ ನಾಳೆ ನಟಿ ಪ್ರಿಯಾಂಕಾ ಉಪೇಂದ್ರ ಲಾಂಚ್ ಮಾಡಲಿದ್ದು, ಅದರ ಎಕ್ಸ್ ಕ್ಲೂಸಿವ್ ಮೇಕಿಂಗ್ ಪವರ್ ಟಿವಿಗೆ ಲಭ್ಯವಾಗಿದೆ. ತಿಂಗಳ ಹಿಂದೆ ತಂದೆಯನ್ನ ಕಳೆದುಕೊಂಡ ನಟಿ ರೂಪಿಕಾ ಈ ಹಾಡನ್ನ ತಮ್ಮ ತಂದೆಗೆ ಡೆಡಿಕೇಟ್ ಮಾಡೋದಾಗಿ ಪವರ್ ಟಿವಿಗೆ ಪ್ರಯಿಕ್ರಿಯಿಸಿದ್ದಾರೆ.

Exit mobile version