Site icon PowerTV

ಸಿದ್ದರಾಮಯ್ಯ ಮಾತ್ರ ಹುಚ್ಚ ಅಲ್ಲ, ಸಂಪುಟದಲ್ಲಿ ಇರುವವರೆಲ್ಲಾ ಹುಚ್ಚರು : ಸದಾನಂದ ಗೌಡ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬರಿಗೆ ಹುಚ್ಚು ಹಿಡಿದಿದ್ರೆ ಸರಿ.. ಆದರೆ, ಅವರ ಸಚಿವ ಸಂಪುಟದಲ್ಲಿ ಇರೋರಿಗೆಲ್ಲಾ ಹುಚ್ಚು ಹಿಡಿದಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಛೇಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಆಗಲಿದೆ ಅಂತ ನಿರ್ಣಯ ಮಾಡಿದ ದಿನದಿಂದ ಕಾಂಗ್ರೆಸ್ ನವರಿಗೆ ತಲೆ ಕೆಟ್ಟಿದೆ. ಯಾರಾದರೂ ಒಬ್ಬರಿಗೆ ಕೆಡೋದು ಸಾಮಾನ್ಯ, ಆದ್ರೆ ಎಲ್ಲಾರಿಗೂ ತಲೆ ಕೆಟ್ಟಿದೆ ಎಂದು ಕುಟುಕಿದ್ದಾರೆ.

ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ನೋಡಿದೆ. ಇದನ್ನು ಸಹಿಸಿಕೊಳ್ಳೋಕೆ ಆಗಲ್ಲ. ರಾಮ ಇಲ್ಲ ಎಂದು ನ್ಯಾಯಾಲಯಕ್ಕೆ ಅಫಿಡಿವೇಟ್ ಹಾಕಿದ್ದ ಅಯೋಗ್ಯರು ಇವರು. ರಾಜಣ್ಣ ಹೇಳಿಕೆ ದೊಡ್ಡದಾಗಿ ಕಾಣಲ್ಲ, ಜನರು ಇದನ್ನು ಸಹಿಸಲ್ಲ. ಜನರು ಎಲ್ಲಿ ಎದ್ದು ಬಿಡ್ತಾರೋ ಎನ್ನುವ ಆತಂಕ ನನಗೆ ಇದೆ ಎಂದು ಚಾಟಿ ಬೀಸಿದ್ದಾರೆ.

ಡಿಕೆಶಿ ವಿರುದ್ಧ ಎತ್ತಿ ಕಟ್ಟುವ ಕೆಲಸ‌ ಮಾಡ್ತಿದ್ದಾರೆ

ಸಿಎಂ ಸಿದ್ದರಾಮಯ್ಯನವರೇ, ನೀವು ಜನಪರವಾಗಿ ಕೆಲಸ ಮಾಡುವ ಕಾರ್ಯ ಮಾಡಬೇಕಿತ್ತು. ಡಿ.ಕೆ. ಶಿವಕುಮಾರ್ ಮೇಲೆ ಯಾರೆಲ್ಲಾ ಬಾಣ ಬಿಡುತ್ತಾರೆಯೋ ಅವರ ಪರ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯ ಪರ ಇರೋರಿಗೆ, ಡಿಕೆಶಿ ವಿರೋಧಿ ಬಣ ಎತ್ತಿ ಕಟ್ಟುವ ಕೆಲಸ‌ ಮಾಡುತ್ತಿದ್ದಾರೆ ಎಂದು ಡಿ.ವಿ. ಸದಾನಂದ ಗೌಡ ಹರಿಹಾಯ್ದಿದ್ದಾರೆ.

Exit mobile version