Site icon PowerTV

ರಾಮನ ಅವಹೇಳನ ಮಾಡಿದ್ರೆ ಡಿಸಿಎಂ ಮಾಡ್ತಾರೆ ಕಣ್ಲಾ : ಬಿಜೆಪಿ ಲೇವಡಿ

ಬೆಂಗಳೂರು : ರಾಮಲಲ್ಲಾನ ಮೂರ್ತಿಯನ್ನು ಟೆಂಟ್ ಗೊಂಬೆಗೆ ಹೋಲಿಸಿ ರಾಮಮಂದಿರ ಕುರಿತು ಲಘುವಾಗಿ ಹೇಳಿಕೆ ನೀಡಿದ್ದ ಸಹಕಾರಿ ಸಚಿವ ಕೆ.ಎನ್. ರಾಜಣ್ಣರಿಗೆ ಬಿಜೆಪಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ರಾಮನ ಅವಹೇಳನ ಮಾಡಿದ್ರೆ ನನ್ನ ಡಿಸಿಎಂ ಮಾಡ್ತಾರೆ ಎಂಬ ಉದ್ದೇಶ ರಾಜಣ್ಣರದ್ದು ಎಂದು ಪೋಸ್ಟರ್ ಹಾಕಿ ಲೇವಡಿ ಮಾಡಿದೆ.

ರಾಮನಿಗೆ ಯಾಕೆ ಅವಹೇಳನ ಮಾಡುತ್ತೀರಾ ರಾಜಣ್ಣ ಎಂದೂ.. ಹಿಂದೂ ಧರ್ಮಕ್ಕೆ, ರಾಮನಿಗೆ ಅವಹೇಳನ ಮಾಡಿದರೆ ಮಾತ್ರ ನಮ್ಮ ಹೈಕಮಾಂಡ್ ನನ್ನನ್ನು ಡಿಸಿಎಂ ಮಾಡ್ತಾರಂತೆ, ಅದಕ್ಕೆ ಕಣ್ಲಾ.. ಎಂದೂ ಪ್ರಶ್ನೆ ಹಾಗೂ ಉತ್ತರ ಹಾಕಿ ವ್ಯಂಗ್ಯವಾಡಿದೆ.

ಹಿಂದೂ ಧರ್ಮದ ಅವಹೇಳನವೇ ಉಸಿರು

ಕಾಂಗ್ರೆಸ್​ ಪಕ್ಷ ಹಾಗೂ ನಾಯಕರು, ತನ್ನ ಸ್ವಾರ್ಥ ಸಾಧನೆಗಾಗಿ ಹಿಂದೂ ಧರ್ಮ ಮತ್ತು ಹಿಂದೂ ದೇವರುಗಳ ಅವಹೇಳನವನ್ನೇ ಉಸಿರಾಗಿಸಿಕೊಂಡಿದ್ದಾರೆ ಎಂದು ಕೈ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

Exit mobile version