Site icon PowerTV

ರಾಮಮಂದಿರ ಉದ್ಘಾಟನೆ.. ಗರ್ಭಿಣಿಯರಿಗೆ ಯತ್ನಾಳ್ ಭರ್ಜರಿ ಆಫರ್

ವಿಜಯಪುರ : ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭರ್ಜರಿ ಆಫ್ ಘೋಷಣೆ ಮಾಡಿದ್ದಾರೆ.

ಜನವರಿ 22 ರವರೆಗೆ ವಿಜಯಪುರದ ಜೆ.ಎಸ್​.ಎಸ್ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಸಂಪೂರ್ಣ ಉಚಿತ ಹೆರಿಗೆ ಸೌಲಭ್ಯ ಕಲ್ಪಿಸಿರುವುದಾಗಿ ಹೇಳಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಯತ್ನಾಳ್, ಅಯೋಧ್ಯಾ ಸಂಭ್ರಮೋತ್ಸವ. ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಜನವರಿ 18 ರಿಂದ ಜನವರಿ 22 ರವರೆಗೆ ಹೆರಿಗೆ ಮಾಡಿಸಿಕೊಂಡರೆ, ಜನಿಸಿದ ಪ್ರತಿ ಮಗುವನ್ನು ರಾಮ ಹಾಗೂ ಸೀತೆಯ ಪ್ರತಿರೂಪವೆಂದು ಪರಿಗಣಿಸಿ ಹೆರಿಗೆಯನ್ನು ಸಂಪೂರ್ಣ ಉಚಿತವಾಗಿ ನೆರವೇರಿಸಲಾಗುವುದು. ಜೈ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ.

ರಾಮಲಲ್ಲಾ ಪ್ರತಿಷ್ಠಾಪನೆ ವೇಳಾಪಟ್ಟಿ

Exit mobile version