Site icon PowerTV

ಕಾಂಗ್ರೆಸ್​ಗಾಗಿ ನನ್ನ ಪ್ರಾಣವನ್ನೇ ತೆತ್ತಿದ್ದೇನೆ, ಅವರಿಂದ ಸಿಕ್ಕಿದ್ದೇನು? : ಹೆಚ್.ಡಿ. ದೇವೇಗೌಡ ಭಾವುಕ

ಹಾಸನ : ಕಾಂಗ್ರೆಸ್​ಗಾಗಿ ನನ್ನ ಪ್ರಾಣವನ್ನೇ ತೆತ್ತಿದ್ದೇನೆ. ಆದರೆ, ಅವರಿಂದ ಸಿಕ್ಕಿದ್ದೇನು? ನಾವು ಯಾರಿಗೆ ಅನ್ಯಾಯ ಮಾಡಿದ್ದೇವೆ ಸತ್ಯ ಹೇಳಿ? ಎಂದು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಭಾವುಕರಾಗಿದ್ದಾರೆ.

ಬೇಲೂರಿನಲ್ಲಿ ಚುನಾಯಿತ ಸದಸ್ಯರು ಹಾಗೂ ಮಾಜಿ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇವೇಗೌಡರ ಮಕ್ಕಳು ಯಾರಿಗೆ ಅನ್ಯಾಯ ಮಾಡಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದ ಮಾತ್ರಕ್ಕೆ ಯಾರನ್ನು ಬಿಟ್ಟುಕೊಡುವುದಿಲ್ಲ. ನನ್ನ ಅಣ್ಣ ತಮ್ಮಂದಿರು ಮುಸ್ಲಿಂ ಬಾಂದವರು. ನಿಮ್ಮ‌ರಕ್ಷಣೆಗಾಗಿ ಈ ದೇಹ ಸವೆಸಿದ್ದೇನೆ. ನಿಮಗಾಗಿ ಮೀಸಲಾತಿ ಕೊಟ್ಟಿದ್ದು ಯಾರು? ನಾವು ರೈತರ ಮಕ್ಕಳು ನಿಮ್ಮನ್ನ ಬಿಟ್ಟು ನಾವು ಎಲ್ಲಿಗೆ ಹೋಗೋಣ? ಇದೇ ಕೊನೆ ಅಲ್ಲ, ನಿಮ್ಮ ಬಳಿ ಮತ್ತೆ ಬರುತ್ತೇನೆ ಎಂದು ಹೇಳಿದ್ದಾರೆ.

ನಾನು ನನ್ನ ಹೆಂಡತಿ ಒಡವೆ ಅಡವಿಟ್ಟೆ

ಯಾರೋ ಒಬ್ಬ ಅನಗತ್ಯವಾಗಿ ಪುತ್ರ ಹೆಚ್.ಡಿ. ರೇವಣ್ಣರ ಮೇಲೆ ಆಪಾದನೆ ಮಾಡ್ತಾರೆ. ಮಾಡಲಿ ಅವರು ದೊಡ್ಡೋರು, ತುಂಬಾ ದೊಡ್ಡ ವ್ಯಕ್ತಿ ಅವರು. ನಾನು ನನ್ನ ಹೆಂಡತಿ ಒಡವೆ ಅಡವಿಟ್ಟು ಪಡುವಲಹಿಪ್ಪೆ ಗ್ರಾಮದಲ್ಲಿ ಜಮೀನು ತಗೊಂಡ್ರೆ ನನ್ನ ಮೇಲೆ‌ ಕೇಸ್ ಹಾಕಿದ್ರು. ಸುಪ್ರೀಂಕೋರ್ಟ್ ವರೆಗೂ ತೆಗೆದುಕೊಂಡು ಹೋದರು. ನಾನು ಇಂತಹ ನೋವಿನಿಂದ ಬಂದವನು ಎಂದು ಹೆಚ್​.ಡಿ. ದೇವೇಗೌಡ ಭಾವುಕರಾಗಿದ್ದಾರೆ.

Exit mobile version