Site icon PowerTV

ರಾಜಣ್ಣ.. ಆ ಗೊಂಬೆ ಮುಂದೆ ನಿಮಗೆ ಹುರುಳಾಗುತ್ತೆ : ಡಿ.ವಿ. ಸದಾನಂದಗೌಡ

ಬೆಂಗಳೂರು : ರಾಮಲಲ್ಲಾನ ಮೂರ್ತಿಯನ್ನು ಗೊಂಬೆಗೆ ಹೋಲಿಕೆ ಮಾಡಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜಣ್ಣ ಅವರೇ, ನೀವು ಕಂಡ ಗೊಂಬೆ ಮುಂದೆ ನಿಮಗೆ ಹುರುಳಾಗಲಿದೆ ಎಂದು ಛೇಡಿಸಿದ್ದಾರೆ.

ಶ್ರೀ ರಾಮನ ಭಕ್ತರನ್ನು ಕೆಣಕುವ ಕೆಲಸ ಮಾಡಬೇಡಿ. ರಾಜಣ್ಣ ಏನಂದ್ರು..? ಗೊಂಬೆ ತೆಗೆದುಕೊಂಡು ಹೋಗಿ ಕೂರಿಸಿದ್ದಾರಂತೆ. ಹಲಸುಂಡೆ ರೋಗ ಬಂದವರಿಗೆ ಹಳದಿಯೇ ಕಾಣುತ್ತಂತೆ. ಸಿದ್ದರಾಮಯ್ಯ ಇವರಿಗೆ ಸಹಕಾರ ಸಚಿವ ಸ್ಥಾನ ಕೊಟ್ಟಿದ್ದಾರೆ, ಎಂತ ಮೂರ್ಖ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಇದನ್ನ ಖಂಡಿಸಲಿಲ್ಲ ಎಂದು ಕುಟುಕಿದ್ದಾರೆ.

ಕೋಲಾರದಲ್ಲಿ ಬ್ಯಾನರ್ ಹರಿಯುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರೇ, ರಾಜ್ಯದಲ್ಲಿ ನಿಮ್ಮ ಫೋಟೋ ಹರಿದುಹಾಕುವ ಕಾಲ ಬರಲಿದೆ. ನಾವೇ ಮಾಡಿಕೊಳ್ಳುವ ಕೆಲಸಕ್ಕೆ, ಸಮಾಜವನ್ನ ಕೆಣಕುವ ಕೆಲಸ ಮಾಡಬೇಡಿ. ರಾಜಣ್ಣ ಅವರೇ, ನೀವು ಕಂಡ ಗೊಂಬೆ ಮುಂದೆ ನಿಮಗೆ ಹುರುಳಾಗಲಿದೆ. ಅಯೋಧ್ಯೆ ಮೂಲವನ್ನೇ ನೋಡಲಾಗಲಿಲ್ಲ‌. ಸಿದ್ದರಾಮಯ್ಯ ಅವರನ್ನ ಹೊಗಳಲು ಮುಂದಾಗಿದ್ದೀರಿ. ಮುಂದೆ ನೀವು ಮೂರು ಹೋಳಾಗಿ, ಕಾಂಗ್ರೆಸ್ ಹರಿದು ಹಂಚಿ ಹೋಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಜನ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ

ಇದು ಭಾವನಾತ್ಮಕ ಹೇಳಿಕೆಯಾಗಿದೆ. ಜನ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ. ಕೂಡಲೇ ಸಾರ್ವಜನಿಕವಾಗಿ ಕ್ಷಮೆ‌ ಕೇಳಿ. ಸಾರ್ವಜನಿಕರಲ್ಲಿ ಗೊಂದಲ‌ ಹುಟ್ಟಿಸಲಿದೆ. ಇದನ್ನ ಕೂಡಲೇ ಕೈಬಿಡಬೇಕು. ರಾಜಣ್ಣ ಮೂಲಕ ಕ್ಯಾಪ್ಟನ್ ಆಗಿ ಕೇಳಿಸುವ ಕೆಲಸ ಮಾಡಿ ಎಂದು ಸದಾನಂದಗೌಡ ಹೇಳಿದ್ದಾರೆ.

Exit mobile version