Site icon PowerTV

ನಟ ಸುದೀಪ್ ಹಾಗು ಫ್ಯಾನ್ಸ್​ ಗೆ ಕ್ಷಮೆ ಕೇಳಿದ ಬುಲೆಟ್ ಪ್ರಕಾಶ್​ ಪುತ್ರ ರಕ್ಷಕ್​!

ಬೆಂಗಳೂರು: ಬಿಗ್​ ಬಾಸ್​ ಸ್ಪರ್ಧಿ ಹಾಗು ಹಾಸ್ಯ ನಟ ಬುಲೆಟ್​ ಪ್ರಕಾಶ್​ ಪುತ್ರ ರಕ್ಷಕ್​ ಬುಲೆಟ್​ ಸುದೀಪ್​ ಕುರಿತು ಹೇಳಿರುವ ಮಾತುಗಳು ಬಾರಿ ಚರ್ಚೆಗೆ ಗ್ರಾಸವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್​ ಫ್ಯಾನ್ಸ್​ ಆಕ್ರೋಶ ಹೊರ ಹಾಕಿದ್ದಾರೆ. ಈ ಹಿನ್ನೆಲೆ ಇದೀಗ ರಕ್ಷಕ್ ಬುಲೆಟ್​ ಸುದೀಪ್​ ಅಭಿಮಾನಿಗಳಿಗೆ ಕ್ಷಮೇ ಕೇಳಿದ್ದಾರೆ.

ʻಬಿಗ್‌ಬಾಸ್ʼ ಕನ್ನಡ ಸೀಸನ್‌ 10ರಲ್ಲಿ ರಕ್ಷಕ್‌ ಬುಲೆಟ್‌ ಒಂದು ತಿಂಗಳ ಕಾಲ ಬಿಗ್‌ಬಾಸ್‌ನಲ್ಲಿದ್ದು ಬಳಿಕ ಎಲಿಮಿನೇಟ್‌ ಆಗಿ ಹೊರಬಂದಿದ್ದರು. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ʻʻಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಅನ್ನೋ ಥರ ಎಲ್ಲರೂ ಇರ್ತಾರೆʼʼಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸುದೀಪ್‌ ಫ್ಯಾನ್ಸ್‌ ಕೂಡ ರಕ್ಷಕ್‌ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಅದರಂತೆ ಇದೀಗ ರಕ್ಷಕ್‌ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ಮಾಲ್ ಆಫ್ ಏಷ್ಯಾದಲ್ಲಿ ರಾಮಮಂದಿರ ಉದ್ಘಾಟನೆಯ ಲೈವ್ ಟೆಲಿಕಾಸ್ಟ್​​ಗೆ ಮನವಿ!

ಈ ಕುರಿತು ವಿಡಿಯೊ ಒಂದನ್ನು ಮಾಡಿ ಪ್ರತಿಕ್ರಿಯಿಸಿರುವ ರಕ್ಷಕ್​, ಎರಡು ದಿನಗಳಿಂದ ಒಂದು ವಿಡಿಯೊ ಹರಿದಾಡ್ತಿದೆ. ಅಂದ್ರೆ, ನಾನು ಸುದೀಪ್ ಅಣ್ಣನ ಬಗ್ಗೆ ನೆಗೆಟಿವ್‌ ಆಗಿ ಮಾತನಾಡಿದೆ ಎಂದು. ನಾನು ಹೇಳಿದ್ದು ಆ ಕಾಂಟಾಸ್ಟ್‌ನಲ್ಲಿ ಅಲ್ಲ. ಇಡೀ ಸಂದರ್ಶನ ನೋಡಿದರೆ ನಿಮಗೆ ತಿಳಿಯುತ್ತದೆ. ಏನಕ್ಕೆ ಯಾವ ಲೈನ್‌ ಹೇಳಿದೆ ಎಂದು ಗೊತ್ತಾಗುತ್ತದೆ. ನನ್ನ ಹೇಳಿಕೆಯಿಂದ ಬೇಜಾರಾಗಿದ್ದರೆ, ಎಲ್ಲರಿಗೂ ಸಾರಿ. ಸುದೀಪ್‌ ಅಣ್ಣನಿಗೂ ಮತ್ತು ಸುದೀಪ್‌ ಅಣ್ಣನ ಫ್ಯಾನ್ಸ್‌ಗೂ. ತುಂಬ ಗೌರವ ಇದೆ. ಸುದೀಪಣ್ಣನಿಗೆ ನಮ್ಮ ತಂದೆ ಮೇಲೆ ಅಪಾರ ಪ್ರೀತಿ ಇತ್ತು. ಅವರ ಮೇಲೆ ನನಗೆ ಅಪಾರ ಗೌರವ ಇದೆʼʼಎಂದು ಕ್ಷಮೆ ಕೇಳಿದ್ದಾರೆ.

Exit mobile version