Site icon PowerTV

ಅಂಗನವಾಡಿ ಮೇಲ್ಚಾವಣಿ ಕುಸಿದು ಮಗುವಿನ ತಲೆಗೆ ಪೆಟ್ಟು

ತುಮಕೂರು : ಅಂಗನವಾಡಿ ಮೇಲ್ಚಾವಣಿ ಕುಸಿದು ಮಗುವಿನ ತಲೆಗೆ ಪೆಟ್ಟಾಗಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಹಡವನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.

ಅಂಗನವಾಡಿ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ತಲೆಯ ಮೇಲೆ ಮೇಲ್ಚಾವಣಿಯೇ ಕಳಚಿಬಿದ್ದು ಅಪಘಾತವಾಗಿದೆ. ಘಟನೆಯಲ್ಲಿ ರುದ್ರೇಶ್ ಎಂಬ ನಾಲ್ಕು ವರ್ಷದ ಮಗು ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದ ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಕಟ್ಟದ ಮೇಲ್ಚಾವಳಿ ಶಿಥಲವಾಗಿದ್ದರ ಬಗ್ಗೆ ಸಾಕಷ್ಟು ಸಲ ದೂರು ನೀಡಿದ್ದರೂ ಸ್ಥಳೀಯ ತಲೆಕೆಡಿಸಿಕೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ಶೀಘ್ರವೇ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Exit mobile version