Site icon PowerTV

ರಿಲೀಸ್ ಆದ ಒಂದೇ ತಿಂಗಳಲ್ಲೇ OTTಯಲ್ಲಿ ಸಲಾರ್!

ಬೆಂಗಳೂರು : ಹಲವಾರು ಕಡೆ ಸಲಾರ್ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಪ್ರಭಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ.

ನೆಟ್ ಫ್ಲಿಕ್ಸ್ ಸಲಾರ್ ಸಿನಿಮಾವನ್ನು ಖರೀದಿಸಿದ್ದು ಫೆಬ್ರವರಿ ಮೊದಲ ವಾರದಿಂದ ಸ್ಟ್ರೀಮಿಂಗ್ ಆರಂಭಿಸಲಿದೆ ಎಂದು ಹೇಳಲಾಗುತ್ತಿದೆ. ಅಧಿಕೃತವಾಗಿ ಸಂಸ್ಥೆ ಹೇಳಿಕೊಳ್ಳದೇ ಇದ್ದರೂ, ಫೆಬ್ರವರಿ ಗ್ಯಾರಂಟಿ ಎನ್ನುವ ಮಾಹಿತಿ ಹೊರ ಬಿದ್ದಿದೆ.

ಇದರ ಜೊತೆ ಜೊತೆಗೆ ಸಲಾರ್ ಸಿನಿಮಾ ಸ್ಪ್ಯಾನಿಷ್ ಭಾಷೆಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಸ್ಪ್ಯಾನಿಷ್ ಭಾಷೆಗೆ ಚಿತ್ರವನ್ನು ಡಬ್ ಮಾಡಲಾಗುತ್ತಿದ್ದು, ಮಾರ್ಚ್ 7 ರಂದು ರಿಲೀಸ್ ಮಾಡುವುದಾಗಿ ಸಂಸ್ಥೆ ತಿಳಿಸಿದೆ. ಸಲಾರ್ ಸಿನಿಮಾ ಬಾಕ್ಸಾಫೀಸಿನಲ್ಲಿ ಈವರೆಗೂ 627 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ.

ಸಲಾರ್ ಸಿನಿಮಾ ಡಿಸೆಂಬರ್ 22, 2023ರಂದು ದೇಶದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿತ್ತು. ಎಲ್ಲಾ ಭಾಷೆಗಳಲ್ಲೂ ದೊಡ್ಡ ಓಪನಿಂಗ್ ಪಡೆದಿತ್ತು. ಆದರೆ, ರಿಲೀಸ್ ಆದ ಕೇವಲ ಒಂದೇ ತಿಂಗಳಲ್ಲಿ ಸಲಾರ್ ಸಿನಿಮಾ OTTಯಲ್ಲಿ ಬಿಡುಗಡೆಯಾಗುತ್ತಿದೆ.

Exit mobile version