Site icon PowerTV

‘ಕಾಟೇರ’ನ ಮಚ್ಚೇಟಿಗೆ ಕಾಂತಾರ, ಕೆಜಿಎಫ್ ದಾಖಲೆ ಪೀಸ್.. ಪೀಸ್..!

ಬೆಂಗಳೂರು : ‘ಕಾಟೇರ’ನ ಮಚ್ಚೇಟಿಗೆ ಕಾಂತಾರ ಹಾಗೂ ಕೆಜಿಎಫ್ ದಾಖಲೆ ಪಿಸ್ ಪೀಸ್.. ಕಾಂತಾರ 175 ಕೋಟಿ, ಕೆಜಿಎಫ್​-2 165 ಕೋಟಿ, ಕನ್ನಡದ ಕಾಟೇರ ಗಳಿಸಿದ್ದು ಬರೋಬ್ಬರಿ 200 ಕೋಟಿ!

‘ಮಚ್ಚು ಎರಡ್ದಪ ಕೆಂಪ್ ಆಗ್ಬಹುದು.. ಆದ್ರೆ, ಬಾಕ್ಸ್​ ಆಫೀಸ್​ ಧೂಳೀಪಟ ಆಗೋದು ಒಂದೇ ದಪ.. ಅದು ಸುಲ್ತಾನ ಬಂದಾಗ ಮಾತ್ರ..!’

ಹೌದು, ಬಾಕ್ಸ್​ ಆಫೀಸ್​ ಸುಲ್ತಾನ ದರ್ಶನ್ ನಟನೆಯ ಕಾಟೇರ ಸಿನಿಮಾ 200 ಕೋಟಿ ಕ್ಲಬ್ ಸನಿಹದಲ್ಲಿದೆ. ಬಿಡುಗಡೆಯಾದ ಮೂರು ವಾರಗಳಲ್ಲೇ (18 ದಿನ)190.89 ಕೋಟಿ ರೂಪಾಯಿ ಕಮಾಯ್ ಮಾಡಿದ್ದು, ಒಂದೆರಡು ದಿನಗಳಲ್ಲಿ 200 ಕೋಟಿ ಕ್ಲಬ್​ಗೆ ಸೇರಲಿದೆ.

ಸಿನಿಮಾಗೆ ಸಖತ್ ರೆಸ್ಪಾನ್ಸ್​ ಸಿಗುತ್ತಿದ್ದು, ಚಿತ್ರಮಂದಿರಗಳಲ್ಲಿ ಹೌಸ್​​ಫುಲ್​ ಪ್ರದರ್ಶನ ಕಣುತ್ತಿದೆ. ಈ ಮೂಲಕ ‘ಕಾಟೇರ’ ಸ್ಯಾಂಡಲ್​​ವುಡ್​ನ ಸೂಪರ್ ಹಿಟ್ ಚಿತ್ರ ಎನಿಸಿಕೊಂಡಿದೆ. ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ದೊಡ್ಡ ಗೆಲುವು ಕಂಡಿದ್ದಾರೆ.

18 ದಿನ, 190 ಕೋಟಿ, UK ಕಡೆಕಾಟೇರ’

ಕಳೆದ ಡಿಸೆಂಬರ್ 29ರಂದು ರಿಲೀಸ್ ಆದ ಕಾಟೇರ, ಪರಭಾಷಾ ಸಿನಿಮಗಳಾದ ಡಂಕಿ ಹಾಗೂ ಸಲಾರ್ ಅಬ್ಬರದ ನಡುವೆಯೂ ಅದ್ಭುತ ಓಪನಿಂಗ್ ಪಡೆದು ಯಶಸ್ಸು ಕಂಡಿದೆ. ಕಾಟೇರ ರಿಲೀಸ್ ಆದ ಮೊದಲ ವಾರದಲ್ಲೇ 100 ಕೋಟಿ ಕ್ಲಬ್​ ಸೇರಿತ್ತು. ಇದೀಗ, ಸತತ 19ನೇ ದಿನವೂ ಉತ್ತಮ ಗಳಿಕೆ ಕಂಡಿದ್ದು, 18 ದಿನಗಳಿಗೆ 190.89 ಕೋಟಿ ರೂಪಾಯಿ ಬಾಚಿಕೊಂಡಿದೆ.

ಕರ್ನಾಟಕ ಮಾತ್ರವಲ್ಲದೇ ದುಬೈನಲ್ಲೂ ಕಾಟೇರ ಚಿತ್ರ ಹೌಸ್​ ಫುಲ್​ ಪ್ರದರ್ಶನ ಕಾಣುತ್ತಿದೆ. ಈಗ ಯುಕೆ ಕಡೆಗೆ ‘ಕಾಟೇರ’ ಹೆಜ್ಜೆ ಹಾಕುತ್ತಿದ್ದಾನೆ. ಇದೇ ಜನವರಿ 19ರಿಂದ UKಯಲ್ಲಿ‌ ಕಾಟೇರ ಸಿನಿಮಾ ಅದ್ಧೂರಿ ಬಿಡುಗಡೆಯಾಗಲಿದೆ.

Exit mobile version