Site icon PowerTV

ಕಾಂಗ್ರೆಸ್ಸಿಗರು ಮೋದಿಯವರನ್ನು ಏಕವಚನದಲ್ಲಿ ಬೈದಿಲ್ವಾ?: ಕೋಟಾ ಶ್ರೀನಿವಾಸ ಪೂಜಾರಿ!

ಉಡುಪಿ: ಏಕವಚನದಲ್ಲಿ ಯಾರನ್ನೂ ಬೈಯ್ಯಬಾರದು ಎಂದರೆ ಮೋದಿಯನ್ನು ಏಕವಚನದಲ್ಲಿ ಬೈದ ಸಿದ್ದರಾಮಯ್ಯ ನಿಲುವನ್ನು ಖಂಡಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯವರನ್ನು ಎಷ್ಟು ಬಾರಿ ಏಕವಚನದಲ್ಲಿ ಬೈದಿಲ್ಲ ? ಅದು ತಪ್ಪಲ್ವಾ ? ಕಾಂಗ್ರೆಸ್ ಮುಖಂಡರೇ, ಚರ್ಚೆ ಏಕಮುಖವಾಗಿ ಸಾಗಬಾರದು. ಏಕವಚನದಲ್ಲಿ ಯಾರನ್ನೂ ಬೈಯ್ಯಬಾರದು ಎಂದರೆ ಮೋದಿಯನ್ನು ಏಕವಚನದಲ್ಲಿ ಬೈದ ಸಿದ್ದರಾಮಯ್ಯ ನಿಲುವನ್ನು ಖಂಡಿಸಬೇಕು ಎಂದರು.

ಇದನ್ನೂ ಓದಿ: ಜ.19 ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ!

ಉಡುಪಿಯಲ್ಲಿ ಮಾತನಾಡಿದ ಅವರು, ಎಲ್ಲ ರಾಜಕಾರಣಿಗಳಿಗೂ ಒಂದೇ ಮಾನದಂಡ ಇರಲಿ, ಆಗ ಮಾತ್ರ ನೀವು ಮಾಡಿದ ಖಂಡನೆಗಳಿಗೆ ಅರ್ಥ ಬರುತ್ತದೆ. ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ‘ಇವ ಗನ್ ತೆಗೆದುಕೊಂಡು ಹೋಗಿದ್ನಾ?’ ಎಂದು ಕಾಂಗ್ರೆಸ್ ನಾಯಕರು ಮೋದಿಯ ಬಗ್ಗೆ ಮಾತನಾಡಿದ್ದರು, ಇದು ಎಷ್ಟು ಸರಿ ಎಂದು ಕೋಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Exit mobile version