Site icon PowerTV

ಸಿಎಂ ಸ್ಥಾನಕ್ಕೆ ಅಡ್ಡವಿರುವ ‘ಬಂಡೆ’ ಯಾವುದು? : ಯತ್ನಾಳ್ ಪ್ರಶ್ನೆ

ವಿಜಯಪುರ : ಗಾಢ ನಿದ್ರೆಯೇ ಪ್ರಧಾನಿ ಮೋದಿಯವರ ಮಂತ್ರ ಎಂದು ಲೇವಡಿ ಮಾಡಿದ್ದ ಸಿಎಂ ಸಿದ್ದರಾಮಯ್ಯರಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನೀವು ಎಷ್ಟು ವರ್ಷ ಮುಖ್ಯಮಂತ್ರಿ? ಎಂದು ಮೊದಲು ರಾಜ್ಯದ ಜನತೆಗೆ ತಿಳಿಸಿ. ನಿಮ್ಮ ಸಿಎಂ ಸ್ಥಾನಕ್ಕೆ ಅಡ್ಡವಿರುವ ‘ಬಂಡೆ’ ಯಾವುದು? ಎಂದು ಪ್ರಶ್ನೆ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಸಿಎಂ ಕುರ್ಚಿಗೇ ಕಂಟಕವಿದೆ. ಹೀಗಿರುವಾಗ ನಿಮ್ಮ ನಾಯಕರೇ ಸಾಲಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ವಿಷಯವನ್ನು ಮರೆಮಾಚಲು ಹತಾಶರಾಗಿ ಪ್ರಧಾನಿ ಮೋದಿಯವರ ವಿರುದ್ಧ  ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಚಾಟಿ ಬೀಸಿದ್ದಾರೆ.

ಶ್ರೀರಾಮನು ಸಿದ್ದುಗೆ ದಯೆ ಕರುಣಿಸಲಿ

ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ಕಾಂಗ್ರೆಸ್ ಪಾಪ ತೊಳೆಯಲು ಸಿದ್ದರಾಮಯ್ಯ ಅಯೋಧ್ಯೆಗೆ ಭೇಟಿ ನೀಡಲಿ. ತಪ್ಪೊಪ್ಪಿಕೊಂಡು, ಕ್ಷಮೆ ಕೋರಿ ಶ್ರೀರಾಮನ ದರ್ಶನ ಮಾಡಿ ಅವರ ಪಕ್ಷ ರಾಮನಿಗೆ ಹಾಗೂ ರಾಮ ಭಕ್ತರಿಗೆ ಮಾಡಿದ ಅನ್ಯಾಯವನ್ನು ಒಪ್ಪಿಕೊಳ್ಳಲಿ. ಶ್ರೀರಾಮನು ಅವರಿಗೆ ದಯೆ ಕರುಣಿಸಲಿ ಎಂದು ಯತ್ನಾಳ್ ಕುಟುಕಿದ್ದಾರೆ.

Exit mobile version