Site icon PowerTV

ಮದ್ವೆಗೆ ನಕಾರ, ಯುವತಿಗೆ ಚಾಕು ಇರಿತ!

ಶಿವಮೊಗ್ಗ: ಮದುವೆಗೆ ನಿರಾಕರಿಸಿದ ಕಾರಣಕ್ಕೆ 22 ವರ್ಷದ ಅಂಬಿಕಾ ಎಂಬ ಯುವತಿಗೆ ಭಗ್ನ ಪ್ರೇಮಿಯೊಬ್ಬ ಚಾಕುವಿನಿಂದ ಇರಿದಿರುವ ಘಟನೆ ಶಿವಮೊಗ್ಗ ನಗರದ ಶಿವಪ್ಪ ನಾಯಕ ಸರ್ಕಲ್ ಬಳಿ ನಡೆದಿದೆ.

ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನ ನಗರದ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ 28 ವರ್ಷದ ಚೇತನ್​ನನ್ನ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆಗೊಳಗಾದ ಯುವಕನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಇದನ್ನೂ ಓದಿ: ಬಡವರಿಗೆ ಮನೆ ಕಟ್ಟಿಕೊಡಿ ಎಂದ ಮಾಜಿ ಸಚಿವರ ವಿರುದ್ದ ಸಚಿವ ಜಮೀರ್​ ಆಕ್ರೋಶ!

ಅಂಬಿಕಾ ಮನೆಯವರ ಜೊತೆ ಮದುವೆ ಮಾಡಿಕೊಡುವಂತೆ ಯುವಕ ಚೇತನ್ ಪ್ರಸ್ತಾಪಿಸಿದ್ದ, ಆದರೇ, ಹುಡುಗಿಯ ಮನೆಯವರು ಮದುವೆಗೆ ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಯುವಕ, ಯುವತಿಯನ್ನ ಹಿಂಬಾಲಿಸಿಕೊಂಡು ಬಂದು ಚಾಕುವಿಂದ ಇರಿದಿದ್ದಾನೆ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Exit mobile version