Site icon PowerTV

ಬಡವರಿಗೆ ಮನೆ ಕಟ್ಟಿಕೊಡಿ ಎಂದ ಮಾಜಿ ಸಚಿವರ ವಿರುದ್ದ ಸಚಿವ ಜಮೀರ್​ ಆಕ್ರೋಶ!

ಬೆಂಗಳೂರು: ಬಡವರಿಗೆ ಮನೆ ಕಟ್ಟಿಕೊಡಿ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್​​ ವಿರುದ್ಧ ಸಚಿವ ಜಮೀರ್ ಅಹಮದ್ ಖಾನ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ ಬಿಜೆಪಿ ಅವಧಿಯಲ್ಲಿ ಅಶ್ವಥ್ ನಾರಾಯಣ್ ಸಚಿವರಾಗಿದ್ದರು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇತ್ತು. ಹಾಗಿದ್ದರೂ ಬಡವರಿಗೆ ಒಂದೇ ಒಂದು ಮನೆ ಕಟ್ಟಿಕೊಟ್ಟಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: ಆಂಧ್ರ ಕಾಂಗ್ರೆಸ್​ ನ ನೂತನ ಅಧ್ಯಕ್ಷೆಯಾಗಿ ವೈ.ಎಸ್​ ಜಗನ್​ ಸಹೋದರಿ ಶರ್ಮಿಳಾ ಆಯ್ಕೆ!

ಕೇಂದ್ರ ಹಾಗೂ ವಸತಿ ಇಲಾಖೆಯ ಹಣ ಬಳಸಿಕೊಂಡು ಬಡವರಿಗೆ ಮನೆ ನಿರ್ಮಿಸಿಬಹುದಿತ್ತು. ಆದರೆ ಒಂದೇ ಒಂದು ಮನೆಯನ್ನು ಕಟ್ಟಿಕೊಟ್ಟಿಲ್ಲ ಎಂದ ವಾಗ್ದಾಳಿ ನಡೆಸಿದರು. ಒಂದು ಮನೆ ಕಟ್ಟಲು 7.50 ಲಕ್ಷ ರೂಪಾಯಿ ವೆಚ್ಚವಾಗುತ್ತಿದೆ. ಕೇಂದ್ರ ಸರ್ಕಾರದ 1.50 ಲಕ್ಷ, ರಾಜ್ಯ ಸರ್ಕಾರದ 1.50 ಲಕ್ಷದ ಜೊತೆಗೆ ಫಲಾನುಭವಿಗಳು 4.50 ಲಕ್ಷ ಹಣ ಸೇರಿಸಿ 7.50 ಲಕ್ಷ ಖರ್ಚಾಗುತ್ತಿದೆ.

ಮುಂದಿನ ಫೆಬ್ರವರಿಯಲ್ಲಿ ರಾಜ್ಯಾದ್ಯಂತ ಒಟ್ಟು 36 ಸಾವಿರ ಮನೆ ನಿರ್ಮಿಸಿ ಬಡವರಿಗೆ ತಮ್ಮ ಸರ್ಕಾರ ಹಸ್ತಾಂತರ ಮಾಡುತ್ತಿದೆ ಎಂದು ಜಮೀರ್​ ಹೇಳಿದರು.

Exit mobile version