Site icon PowerTV

ಗಾಂಧಿ ಕೊಂದ ಗೂಡ್ಸೆ ಕೂಡ ಹಿಂದುನೇ.. : ಕೆ.ಎನ್. ರಾಜಣ್ಣ

ತುಮಕೂರು : ಮಹಾತ್ಮ ಗಾಂಧಿ ಕೊಂದ ಗೂಡ್ಸೆ ಕೂಡ ಹಿಂದುನೇ.. ಅವರ ಹಿಂದುತ್ವವನ್ನು ಪ್ರತಿಪಾದನೆ ಮಾಡೋರೇ ಬಿಜೆಪಿಗಳು ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಕಿಡಿಕಾರಿದ್ದಾರೆ.

ತುಮಕೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಅವರು ಗೂಡ್ಸೆ ಹಿಂದುಗಳು, ನಾವು ಗಾಂಧಿ ಹಿಂದೂಗಳು. ಇದನ್ನ ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿದ್ದಾರೆ.

ಮಹಾತ್ಮ ಗಾಂಧಿಯಂತವರನ್ನ ಕೊಂದ ಇವರನ್ನು ನಾವು ಏನಂತ ಕರೀಬೇಕು..? ಕೊಲೆಗಡುಕರು ಅಂತ ಕರೀಬೇಕಾ..? ದೇಶದ್ರೋಹಿಗಳು ಅಂತ ಕರೀಬೇಕಾ..? ಇಲ್ಲಾ ಇನ್ಯಾವುದಾದರೂ ಹೊಸ ಪದ ಇದ್ಯಾ ಹೇಳಿ.. ಮಾಧ್ಯಮದವರು ಹೇಳಿ ಕೊಡಿ, ಆಮೇಲೆ ನಮಗೆ ಗೊತ್ತಾಗಲ್ಲಾ‌ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಹಿಂದುತ್ವವನ್ನು ಇವರಿಗೇನು ಜಾಗಿರ್ ಕೊಟ್ಟಿಲ್ಲ

ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿಗಳು ಅಂತ ಬೇರೆ ಅವರು ಹೇಳ್ತಾರಲ್ಲಾ.. ನಾವೆಲ್ಲಾ ಹಿಂದೂಗಳೇ, ಹಿಂದುತ್ವವನ್ನು ಇವರಿಗೇನು ಜಾಗಿರ್ ಕೊಟ್ಟಿಲ್ಲ.. ಮಹಾತ್ಮ ಗಾಂಧಿ ಕೂಡ ಹಿಂದುಗಳೇ, ಅವರ ದಾರಿಯಲ್ಲೇ ನಾವು ನಡೆಯುತ್ತಿದ್ದೇವೆ ಎಂದು ಸಚಿವ ಕೆ.ಎನ್. ರಾಜಣ್ಣ ಛೇಡಿಸಿದ್ದಾರೆ.

Exit mobile version