Site icon PowerTV

ಖರ್ಗೆಗೂ ಗ್ರಾಮೀಣಾಭಿವೃದ್ಧಿ ಇಲಾಖೆಗೂ ಸಂಬಂಧವೇ ಇಲ್ಲ : ಬಿಜೆಪಿ ಲೇವಡಿ

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕೆಲಸಕ್ಕೆ ಬಾರದ ವಿಚಾರದಲ್ಲಿ ಟ್ವೀಟ್ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಗ್ರಾಮ ಆಡಳಿತದಲ್ಲಿ ಅಧಿಕಾರಿಗಲ ಕೊರತೆ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಅವರಿಗೂ ಗ್ರಾಮೀಣಾಭಿವೃದ್ಧಿ ಇಲಾಖೆಗೂ ಸಂಬಂಧವೇ ಇಲ್ಲ ಎಂದು ಕುಟುಕಿದೆ.

ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತದಿಂದ ನುಚ್ಚು ನೂರಾಗಿದೆ. ಗ್ರಾಮ ಆಡಳಿತ ಅಧಿಕಾರಿಗಳಿಲ್ಲದೇ ಬರದಿಂದ ಬಸವಳಿಯುತ್ತಿರುವ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳಲ್ಲೆವೂ ಕುಂಠಿತವಾಗಿವೆ‌ ಎಂದು ಕಿಡಿಕಾರಿದೆ.

ಸಿಎಂ, ಖರ್ಗೆ ಪೋಸ್ಟರ್ ರಿಲೀಸ್

‘ಕಾಂಗ್ರೆಸ್​ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಯ ನಿರ್ಲಕ್ಷ್ಯ. ಗ್ರಾಮ ಸ್ವರಾಜ್ಯದ ಕನಸು ನುಚ್ಚು ನೂರು’ ಎಂಬ ಟೈಟಲ್​ನೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಫೋಟೋವನ್ನು ರಾಜ್ಯ ಬಿಜೆಪಿ ಫೋಸ್ಟ್​ ಮಾಡಿದೆ.

Exit mobile version