Site icon PowerTV

ಮದ್ಯ ನೀತಿ ಪ್ರಕರಣ : ಬಿಆರ್​ಎಸ್​ ನಾಯಕಿ ಕವಿತಾಗೆ ಇಡಿ ಸಮನ್ಸ್

ಬೆಂಗಳೂರು : ದೆಹಲಿಯ ಮದ್ಯ ನೀತಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಜಾರಿ ನಿರ್ದೇಶನಾಲಯ ಬಿಆರ್​ಎಸ್ ನಾಯಕಿ ಕೆ. ಕವಿತಾಗೆ ಸಮನ್ಸ್ ಜಾರಿಗೊಳಿಸಿದೆ.

ದೆಹಲಿಯ ಮದ್ಯ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ. ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಆದರೆ, ತಾವು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲಎಂದು ತನಿಖಾಧಿಕಾರಿಗಳಿಗೆ ಇ-ಮೇಲ್ ಸಂದೇಶ ರವಾನೆ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಇಡಿ ಕೆ. ಕವಿತಾ ಅವರನ್ನು ವಿಚಾರಣೆಗೆ ಕರೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ಅವರ ವಕೀಲ ನಿತೇಶ್ ರಾಣಾ ತಿಳಿಸಿದ್ದಾರೆ. ಕೆ. ಕವಿತಾ ಕಳೆದ ವರ್ಷ ಸುಪ್ರೀಂ ಕೋರ್ಟ್‌ನಿಂದ ತಾತ್ಕಾಲಿಕ ತಡೆಯನ್ನು ಪಡೆದಿದ್ದರು ಅದು ಈಗ ಮಾನ್ಯವಾಗಿಲ್ಲ ಎಂದು ಜಾರಿ ನಿರ್ದೇಶನಲಾಯ ಸ್ಪಷ್ಟನೆ ನೀಡಿದೆ. ಕಳೆದ ವರ್ಷ ಈ ಪ್ರಕರಣದಲ್ಲಿ ಆಕೆಯನ್ನು ಮೂರು ಬಾರಿ ವಿಚಾರಣೆಗೊಳಪಡಿಸಲಾಗಿತ್ತು.

Exit mobile version