Site icon PowerTV

ಹಿಂದೂ ಯುವತಿಯರಿಗೆ ಮೆಸೇಜ್ : ಮುಸ್ಲಿಂ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ ಬಜರಂಗದಳ

ಧಾರವಾಡ : ಹಿಂದೂ ಯುವತಿಯರಿಗೆ ಮೆಸೇಜ್ ಮಾಡಿ ಕಾಡಿಸುತ್ತಿದ್ದ ಮುಸ್ಲಿಂ ಯುವಕನನ್ನು ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಫಯಾಜ್ ಎಂಬಾತನೇ ಪೊಲೀಸರ ಅತಿಥಿಯಾಗಿರುವ ಮುಸ್ಲಿಂ ಯುವಕ. ಈತ ಧಾರವಾಡದ ಜ್ಯುಬಿಲಿ ಸರ್ಕಲ್​ನಲ್ಲಿರುವ ರಿಲಾಯನ್ಸ್ ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ರಿಲಾಯನ್ಸ್ ಡಿಜಿಟಲ್‌ಗೆ ಬರುತ್ತಿದ್ದ ಗ್ರಾಹಕರು ಸಾಮಾನ್ಯವಾಗಿ ಮೊಬೈಲ್ ನಂ‌ಬರ್ ನೀಡುತ್ತಾರೆ. ಅದರಲ್ಲಿನ ಹಿಂದೂ ಯುವತಿ ಹಾಗೂ ಮಹಿಳೆಯರ ನಂಬರ್ ಹೆಕ್ಕಿ ತೆಗದು ಸಂಪರ್ಕಿಸುತ್ತಿದ್ದನು. ಅವರೊಂದಿಗೆ ನಯವಾಗಿ ವರ್ತಿಸಿ ಸ್ನೇಹ ಬೆಳೆಸುತ್ತಿದ್ದ ಆರೋಪಿ ಫಯಾಜ್, ವಿಡಿಯೋ ಕಾಲ್​ನಲ್ಲಿ ದೃಶ್ಯ ಸೆರೆಹಿಡಿದು ಬಳಿಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು.

ಬಜರಂಗದಳ ಕಾರ್ಯಕರ್ತರಿಂದ ದಾಳಿ

ಈ ವಿಚಾರ ಬಜರಂಗದಳದ ಕಾರ್ಯಕರ್ತರ ಗಮನಕ್ಕೆ ಬಂದಿತ್ತು. ಕೂಡಲೇ, ರಿಲಾಯನ್ಸ್ ಡಿಜಿಟಲ್‌ಗೆ ಭೇಟಿ ನೀಡಿ ಆರೋಪಿ ಫಯಾಜ್​ನನ್ನು ಹಿಡಿದು ನಿಜ ಕಕ್ಕಿಸಿದ್ದಾರೆ. ಬಳಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಉಪನಗರ ಠಾಣಾ ಪೊಲೀಸರು ಆರೋಪಿ ಫಯಾಜ್​ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Exit mobile version