Site icon PowerTV

ಕನ್ಯೆ ಸಿಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

ವಿಜಯನಗರ: ಮದುವೆಯಾಗಲು ಹುಡುಗಿ ಸಿಗುತ್ತಿಲ್ಲವೆಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ಕೂಡ್ಲಿಗಿ ತಾಲೂಕಿನ‌ ಗುಡೇಕೋಟೆ ಗ್ರಾಮದಲ್ಲಿ ನಡೆದಿದೆ.

ಬಿ.‌ಮಧುಸೂದನ್ (26) ಮೃತ ದುರ್ದೈವಿ. ಯುವಕನ ತಂದೆ ಅರೆ ಹುಚ್ಚನ ಹಾಗೆ ವರ್ತನೆ ಮಾಡುತ್ತಾನೆಂದು ಕನ್ಯೆ ಕೊಡಲು ನಿರಾಕರಿಸುತ್ತಿದ್ದರಂತೆ. ಇದರಿಂದ ಮನನೊಂದಿದ್ದ ಯುವಕ ಕುಡಿಯಲು ಆರಂಭಿಸಿದ್ದಾನೆ.

ನನಗೆ ಮದುವೆ ಅಗಲ್ಲ ಎಂದು ಮಧುಸೂದನ್ ಜನವರಿ 5ರಂದು ವಿಷಸೇವಿಸಿದ್ದಾನೆ. ಕೂಡಲೆ ಮಧುಸೂಧನ್​​ನನ್ನು ಬಳ್ಳಾರಿಯ ವಿಮ್ಸ್​​ ಆಸ್ಪತ್ರೆಗ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಧುಸೂಧನ್​ ಮೃತಪಟ್ಟಿದ್ದಾನೆ.

ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ

Exit mobile version