Site icon PowerTV

ದೇವಸ್ಥಾನ ಕೆಡವಿ ಮಸೀದಿ ನಿರ್ಮಿಸಿದ್ದಾರೆ : ಶಾಸಕ ಯತ್ನಾಳ್

ವಿಜಯಪುರ : ಭಟ್ಕಳದ ಮಸೀದಿಯನ್ನು ಬಾಬ್ರಿ ರೀತಿ ಮಾಡ್ತೀವಿ ಎಂಬ ಸಂಸದ ಅನಂತಕುಮಾರ್​ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ​ಯತ್ನಾಳ್​ ಸ್ಪಷ್ಟನೆ ನೀಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನಗಳನ್ನು ನಾಶ ಮಾಡಿ ಅಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆ ಅನಂತಕುಮಾರ್​ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಹಿಂದೂ ದೇವಸ್ಥಾನಗಳನ್ನ ನಾಶ ಮಾಡುವ ಮೂಲಕ ನಾವು ಹಿಂದೂಗಳನ್ನ ಗೆದ್ದಿದ್ದೇವೆ ಎಂಬ ಸಂಕೇತ ನೀಡಲು ಮತಾಂಧರು ಈ ರೀತಿ ದೇವಸ್ಥಾನಗಳನ್ನು ಧ್ವಂಸ ಮಾಡಿ ದೇವಸ್ಥಾನ ನಿರ್ಮಿಸಿದ್ದರು. ಹಿಂದೂ ದೇವಸ್ಥಾನಗಳಲ್ಲಿದ್ದ ವಜ್ರ, ವೈಢೂರ್ಯ, ಐಶ್ವರ್ಯಗಳನ್ನು ಕೊಳ್ಳೆ ಹೊಡೆದಿದ್ರು ಎಂದು ಹೇಳಿದ್ದಾರೆ.

ಕುತುಬ್ ಮಿನಾರ್ ಮಾದರಿಯಲ್ಲಿ ಸರ್ವೆ

ಮುಂದಿನ ಕೆಲವೇ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬುದಾಬಿಯಲ್ಲಿ ಲಕ್ಷ್ಮಿ ನಾರಾಯಣ ದೇವಸ್ಥಾನ ಉದ್ಘಾಟನೆ ಮಾಡಲಿದ್ದಾರೆ. ಇನ್ನು ವಿಜಯಪುರದಲ್ಲಿ ಹಿಂದೂ ದೇವಸ್ಥಾನಗಳು‌ ಮಸೀದಿಗಳಾಗಿದ್ದರ ಕುರಿತು ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿದೆ. ಕುತುಬ್ ಮಿನಾರ್ ಮಾದರಿಯಲ್ಲಿ ಸರ್ವೆ ಹಾಗೂ ಉತ್ಕನನ ಮಾಡಬೇಕು. ಅವೆಲ್ಲ ಹಿಂದೂ ದೇವಸ್ಥಾನಗಳು ಇದ್ದವು ಎಂಬ ಹಲವಾರು ಗುರುತುಗಳನ್ನು ಹೊಂದಿವೆ. ಪುರಾತತ್ವ ಇಲಾಖೆ ಗಮನಹರಿಸಿದಿದ್ದರೆ ನ್ಯಾಯಾಲಯ ಮೊರೆ ಹೋಗುತ್ತೇವೆ ಎಂದು ಶಾಸಕ ಯತ್ನಾಳ್​ ತಿಳಿಸಿದ್ದಾರೆ.

Exit mobile version