Site icon PowerTV

ಬೆಳಗಾವಿಯ ಅರ್ಧ ನಗರಕ್ಕೆ 5 ಲಕ್ಷ ಲಾಡು ವಿತರಣೆ

ಬೆಳಗಾವಿ : ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮನ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಈ ಐತಿಹಾಸಿಕ ದಿನದಂದು ಬೆಳಗಾವಿಯ ಅರ್ಧ ನಗರಕ್ಕೆ 5 ಲಕ್ಷ ಮೋತಿಚೂರು ಲಾಡು ವಿತರಣೆ ಮಾಡಲು ತಯಾರಿ ಮಾಡಲಾಗಿದೆ.

ಬೆಳಗಾವಿ ದಕ್ಷಿಣ ‌ಕ್ಷೇತ್ರದ ಬಿಜೆಪಿ ‌ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಮೋತಿಚೂರು ಲಾಡು ವಿತರಣೆ ಮಾಡಲಾಗುತ್ತೆ. ಬೆಳಗಾವಿ ದಕ್ಷಿಣ ‌ಕ್ಷೇತ್ರದ 1 ಲಕ್ಷ ಮನೆಗಳಿಗೆ ಲಾಡು ಹಂಚಲಾಗುತ್ತದೆ. ಪ್ರತಿ ಮನೆಗೆ 300 ಗ್ರಾಂನ 5 ಲಾಡು ಒಳಗೊಂಡ ಡಬ್ಬಿ ನೀಡಲು ಪ್ಲಾನ್ ಮಾಡಲಾಗಿದೆ.

ಲಾಡು ತಯಾರಿಸಲು ರಾಜಸ್ಥಾನದಿಂದ 50 ಪರಿಣಿತರು ಬೆಳಗಾವಿಗೆ ಆಗಮಿಸಿದ್ದಾರೆ. ಸ್ಥಳೀಯ ‌250 ಮಹಿಳೆಯರು ಮೋತಿಚೂರು ಲಾಡು ತಯಾರಿಕೆಯಲ್ಲಿ ಸಾಥ್ ಕೊಡಲಿದ್ದಾರೆ. ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ವಿಶೇಷ ಮೋತಿಚೂರು ಲಾಡುಗಳು ತಯಾರಿ ಕಾರ್ಯ ನಡೆದಿದೆ.

ಅಲ್ಲದೆ 10 ಸಾವಿರ ರಾಮಭಕ್ತರ ಕೈಮೇಲೆ ರಾಮನ ಟ್ಯಾಟೋ ಹಾಕಿಸಲಾಗುತ್ತದೆ. ಸ್ವಾತಂತ್ರ್ಯ ಅಮೃತಮಹೋತ್ಸವ ಸಮಯದಲ್ಲೂ ಶಾಸಕ ಅಭಯ್ ಪಾಟೀಲ್ ಪ್ರತಿ ಮನೆಗೆ ಜಿಲೇಬಿ ವಿತರಿಸಿದ್ದರು.

Exit mobile version