Site icon PowerTV

ಅನಂತಕುಮಾರ್​ ಹೆಗಡೆ ಹೇಳಿಕೆಯಲ್ಲಿ ತಪ್ಪೇನು ಇಲ್ಲ ; ಕೆಎಸ್ ಈಶ್ವರಪ್ಪ

ಶಿವಮೊಗ್ಗ: ಅನಂತಕುಮಾರ್​ ಹೆಗಡೆ ಹೇಳಿಕೆಯಲ್ಲಿ ತಪ್ಪೇನು ಇಲ್ಲ ಎಂದು ಪ್ರಚೋದನಕಾರಿ ಹೇಳಿಕೆಗೆ ಈಶ್ವರಪ್ಪ ಸಮರ್ಥನೆ ನೀಡಿದ್ದಾರೆ. 

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ದೇವಸ್ಥಾನಗಳನ್ನ ಒಡೆದು ಮಸೀದಿಗಳನ್ನ ನಿರ್ಮಿಸಿದ್ದಾರೆ. ಹಾಗಾಗಿ ಸಂಸದ ಅನಂತಕುಮಾರ್​ ಹೆಗಡೆ ಹೇಳಿದ್ದಾರೆ. ಅದೇನೂ ತಪ್ಪಲ್ಲ ಎಂದ್ರು. ಬಾಬ್ರಿ ಮಸೀದಿ ನಿರ್ನಾಮದಂತೆ ಭಟ್ಕಳದಲ್ಲಿಯೂ ಮಾಡ್ತೇವೆ, ಅದರ ಸಾಲಿಗೆ ಭಟ್ಕಳದ ಚಿನ್ನದ ಪಳ್ಳಿ ಸೇರಲಿದೆ.

ಇದನ್ನೂ ಓದಿ: ಜೀವನದಲ್ಲಿ ಧೈರ್ಯವಿರಬೇಕು, ಭಂಡತನವಿರಬಾರದು; ಡಿಸಿಎಂ ಡಿಕೆಶಿವಕುಮಾ‌ರ್

ಎಲ್ಲೆಲ್ಲಿ ದೇವಸ್ಥಾನ ಒಡೆದು ಮಸೀದಿಗಳನ್ನು ಕಟ್ಟಿದ್ದಾರೋ ಅಲ್ಲೆಲ್ಲ ಮತ್ತೆ ದೇವಸ್ಥಾನ ನಿರ್ಮಾಣವಾಗಲಿದೆ ಎಂದು ಸಂಸದ ಅನಂತಕುಮಾರ್ ಹೆಗಡೆ ಪ್ರಚೋದನಾಕರಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರೋ ಈಶ್ವರಪ್ಪ ಇದೇನು ತಪ್ಪಲ್ಲ. ಇದನ್ನು ಎಲ್ಲ ಭಾರತೀಯರು ಸ್ವಾಗತ ಮಾಡಬೇಕು ಎಂದರು.

 

 

 

Exit mobile version