Site icon PowerTV

ನನ್ನನ್ನು ಮುಗಿಸೋಕೆ ಸಂಚು ನಡೆಯುತ್ತಿದೆ : ರೇವಣ್ಣ ಅಚ್ಚರಿ ಹೇಳಿಕೆ

ಹಾಸನ : ವಕೀಲ ದೇವರಾಜೇಗೌಡ ಆರೋಪಕ್ಕೆ ಮಾಜಿ‌ ಸಚಿವ ಹೆಚ್.ಡಿ. ರೇವಣ್ಣ ಅವರು ಪ್ರತಿಕ್ರಿಯಿಸಿದ್ದಾರೆ. ಒಳ್ಳೆಯದಕ್ಕೆ ನಾನು ಉತ್ತರ ಕೊಡುತ್ತೇನೆ, ಇಂಥದಕ್ಕೆಲ್ಲಾ ಉತ್ತರ ಕೊಡಲ್ಲ ಎಂದು ಹೇಳಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನ್ನನ್ನು ಮುಗಿಸಬೇಕು ಎಂಬುದು ನಡೆಯುತ್ತಿದೆ. ತನ್ನ ಜೀವಕ್ಕೂ ಸಂಚಿದೆ ಎಂಬ ಅಚ್ಚರಿಯ ಹೇಳಿಕೆ‌ ನೀಡಿದ್ದಾರೆ.

ನಾನು ಜಿಲ್ಲೆಯಲ್ಲಿ 40 ವರ್ಷಗಳ ಕಾಲ ರಾಜಕೀಯ ‌ಮಾಡಿದ್ದೇನೆ. ಇಂತಹವಕ್ಕೆಲ್ಲಾ‌ ಉತ್ತರ ಕೊಡೋಕೆ ಹೋದ್ರೆ ನಾನು ಪಳ್ಳೆದ್ದು ಹೋಗ್ತಿನಿ. ನಮ್ಮ ಪಕ್ಷದ ಮುಖಂಡನನ್ನ ಹಾಡ ಹಗಲೇ ಹೊಡೆದು ಹಾಕಿದ್ರಲ್ಲಾ..? ಅಶ್ವಥ್ ನಾರಾಯಣ್ ಮೇಲೆ ಹಲ್ಲೆ ವೇಳೆ ನನ್ನನ್ನ ಗುರಿ ಇಟ್ಟಿದ್ರು. ನನ್ನ ಬದಲು ಅಶ್ವಥ್ ಟಾರ್ಗೆಟ್ ಮಾಡಿದ್ರು. ಆ ಘಟನೆಯಲ್ಲಿ ಇನ್ನೂ ಇಬ್ಬರ ಅರೆಸ್ಟ್ ಆಗೇ ಇಲ್ಲ ಎಂದು ಕಿಡಿಕಾರಿದ್ದಾರೆ.

ಇಂಥ ಬ್ಲಾಕ್ ಮೇಲ್​ಗೆ ಹೆದರುತ್ತೇನಾ?

ಇಂತಹ ಬ್ಲಾಕ್ ಮೇಲ್ ಗಳಿಗೆಲ್ಲಾ ನಾನು ಹೆದರುತ್ತೇನಾ..? ನನ್ನ ಜೀವನದಲ್ಲಿ ಅದ್ಯಾನ ಆಸ್ತಿ ಬರೆಸಿದ್ದೇನೆ ಹೇಳಿ. ಅವರು ಮಾತಾಡೋ ಲೆವೆಲ್​ಗೆ ನಾನು ಇಳಿಯೋಕಾಗುತ್ತಾ..? ಎಂದು ಹೆಚ್.ಡಿ. ರೇವಣ್ಣ ಗರಂ ಆಗಿದ್ದಾರೆ.

Exit mobile version