Site icon PowerTV

ರೋಹಿತ್ ಮತ್ತೆ ಗೋಲ್ಡನ್ ಡಕ್ : 150ನೇ ಟಿ-20 ಪಂದ್ಯದಲ್ಲಿ ಸೊನ್ನೆ ಸುತ್ತಿ ಕೆಟ್ಟ ದಾಖಲೆ

ಬೆಂಗಳೂರು : ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಮತ್ತೆ ಡಕ್​ ಔಟ್​ ಆಗಿದ್ದಾರೆ. ಈ ಮೂಲಕ 150ನೇ ಟಿ-20 ಪಂದ್ಯದಲ್ಲಿ ಸೊನ್ನೆ ಸುತ್ತಿ ಕೆಟ್ಟ ದಾಖಲೆ ಬರೆದಿದ್ದಾರೆ.

ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ರನ್​ಔಟ್​ ಮೂಲಕ ರೋಹಿತ್ ಶೂನ್ಯಕ್ಕೆ ಔಟಾಗಿದ್ದರು. ಇಂದೋರ್​ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ತಾವು ಎದುರಿಸಿದ ಮೊದಲನೇ ಎಸೆತದಲ್ಲೇ ಕ್ಲೀನ್​ ಬೌಲ್ಡ್​ ಆಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್​ಗಳಲ್ಲಿ 172 ರನ್​ಗೆ ಆಲೌಟ್​ ಆಯಿತು. ಈ ಮೂಲಕ ಭಾರತಕ್ಕೆ 173 ರನ್​ಗಳ ಕಠಿಣ ಗುರಿ ನೀಡಿದೆ. ಅಫ್ಘಾನಿಸ್ತಾನ ಪರ ಗುಲ್ಬದಿನ್ ನೈಬ್ ಅರ್ಧಶತಕ (57) ಸಿಡಿಸಿ ಮಿಂಚಿದರು.

ಉಳಿದಂತೆ ನಜೀಬುಲ್ಲಾ ಝದ್ರಾನ್ 23, ಕರೀಂ ಜನತ್ 20, ಮುಜೀಬ್ ಉರ್ ರೆಹಮಾನ್ 21, ಮೊಹಮ್ಮದ್ ನಬಿ 14, ರೆಹಮಾನುಲ್ಲಾ ಗುರ್ಬಾಜ್ 14 ರನ್ ಸಿಡಿಸಿದರು. ಭಾರತದ ಪರ ಅರ್ಷದೀಪ್ ಸಿಂಗ್ 3,  ಅಕ್ಸರ್ ಪಟೇಲ್ ಹಾಗೂ ರವಿ ಬಿಷ್ಣೋಯ್ ತಲಾ 2, ಶಿವಂ ದುಬೆ 1 ವಿಕೆಟ್ ಪಡೆದರು.

Exit mobile version