Site icon PowerTV

ಭಾರತ್​ ಜೋಡೊ ನ್ಯಾಯ ಯಾತ್ರೆ ಅಲ್ಲ ಡೋಂಗಿ ಯಾತ್ರೆ : ಆರ್.​ಅಶೋಕ್ ವ್ಯಂಗ್ಯ 

ಬೆಂಗಳೂರು: ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್​ ಜೋಡೊ ನ್ಯಾಯ ಯಾತ್ರೆ ಡೋಂಗಿ ಯಾತ್ರೆ ಎಂದು ವಿರೋಧ ಪಕ್ಷದ ನಾಯಕ ಆರ್​. ಅಶೋಕ್​ ಕಿಡಿಕಾರಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಕಳೆದ ಬಾರಿ ದಕ್ಷಿಣದಿಂದ ಯಾತ್ರೆ ಶುರು ಮಾಡಿದ್ದರು.ದಕ್ಷಿಣದಿಂದ ಯಾತ್ರೆ ಶುರುಮಾಡಿದ ಮೇಲೆ ಉತ್ತರ ಭಾರತದಲ್ಲಿ 3 ರಾಜ್ಯಗಳಲ್ಲಿ ಸೋಲಾಗಿದೆ.ಅದು ನ್ಯಾಯ ಪಾದಯಾತ್ರೆ ಅಲ್ಲ ಡೋಂಗಿ ಯಾತ್ರೆ ಎಂದು ಲೇವಡಿ ಮಾಡಿದ್ದಾರೆ.

ಅಲ್ಲಿಂದ ಶುರು ಮಾಡಿ 3 ರಾಜ್ಯಗಳ ಚುನಾವಣೆಯಲ್ಲಿ ಸೋತಿದ್ದಾರೆ.ಎಲ್ಲೆಲ್ಲಿ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಮಾಡುತ್ತೊ ಅಲ್ಲಿ ಕಾಂಗ್ರೆಸ್ ಅವನತಿ ಪ್ರಾರಂಭವಾಗುತ್ತಿದೆ.ದೇಶಕ್ಕೆ ಸರ್ವಾಧಿಕಾರ ತಂದವರು, ಎಮರ್ಜೆನ್ಸಿ ತಂದವರು, ಇಡೀ ಅಧಿಕಾರವನ್ನು, ನ್ಯಾಯಾಂಗವನ್ನು, ಪತ್ರಿಕಾರಂಗವನ್ನು ದಮನ ಮಾಡಿದವರು ನ್ಯಾಯ ಯಾತ್ರೆ ಮಾಡುತ್ತಿದ್ದಾರೆ ಎಂದರು.

ನ್ಯಾಯ ಕೇಳೊಕೆ ಅವರಿಗೆ ಏನು ಅಧಿಕಾರ ಇದೆ. ಎಮರ್ಜೆನ್ಸಿಯಲ್ಲಿ ಕಾಂಗ್ರೆಸ್ ಪಕ್ಷ ನೇರ ಪಾಲುದಾರರು. ನೆಹರು ಕಾಲದಿಂದ ರಾಹುಲ್ ಗಾಂಧಿ ತನಕ ಎಲ್ಲರೂ ಆಗಿನಿಂದ ರಾಮಮಂದಿರವನ್ನು ವಿರೋಧಿಸಿಕೊಂಡು ಬರ್ತಿದ್ದಾರೆ. ರಾಮಮಂದಿರ ಸ್ಥಾಪನೆಗೂ ವಿರೋಧ ಮಾಡಿದ್ದಾರೆ.ಇದು 130 ಕೋಟಿ ಜನರ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಕಿಡಿಕಾರಿದ್ದಾರೆ.

Exit mobile version