Site icon PowerTV

ಶಾಸಕ ರಾಜೇಶ್ ನಾಯ್ಕ್​ಗೆ ಕಾರು ಡಿಕ್ಕಿ : ಪ್ರಾಣಾಪಾಯದಿಂದ ಬಚಾವ್

ಬಂಟ್ವಾಳ : ಶಾಸಕ ರಾಜೇಶ್ ನಾಯ್ಕ್ ಅವರಿಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದಿದ್ದು, ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಂಗಳೂರು ಹೊರವಲಯದ ತೆಂಕ ಎಡಪದವು ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಶಾಸಕ ರಾಜೇಶ್ ನಾಯ್ಕ್ ಅವರು ಸಂಕ್ರಮಣದ ಪ್ರಯುಕ್ತ ಎಡಪದವು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಾಸು ತನ್ನ ಕಾರಿನತ್ತ ನಡೆದುಕೊಂಡು ಬರುತ್ತಿರುವ ವೇಳೆ ಅಪಘಾತ ಸಂಭವಿಸಿದೆ.

ಮೂಡಬಿದಿರೆ ಕಡೆಯಿಂದ ಬರುತ್ತಿದ್ದ ಕಾರು (ಸ್ವಿಫ್ಟ್) ಶಾಸಕರಿಗೆ ಡಿಕ್ಕಿ ಹೊಡೆದಿದೆ. ಕೂಡಲೇ ಕಾರು ಚಾಲಕ ಪರಾರಿಯಾಗಿದ್ದು, ಕಾರು ಗುದ್ದಿದ ರಭಸಕ್ಕೆ ಶಾಸಕರು ಬಿದ್ದು ಕಾಲಿಗೆ ಗಾಯವಾಗಿದೆ. ಶಾಸಕರನ್ನು ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಕಾರು ಚಾಲಕ ಪೋಲೀಸರ ವಶಕ್ಕೆ

ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಶಾಸಕರು ಪಾರಾಗಿದ್ದಾರೆ. ಇದೀಗ ಚಿಕಿತ್ಸೆ ಪಡೆದುಕೊಂಡು ಶಾಸಕರು ಮನೆಗೆ ತೆರಳಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ, ಡಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಸ್ಥಳೀಯರು ಗುರುಪುರದಲ್ಲಿ ಹಿಡಿದು ಚಾಲಕ ಸಹಿತ ಕಾರನ್ನು ಬಜ್ಪೆ ಪೋಲೀಸರಿಗೆ ಒಪ್ಪಿಸಿದ್ದಾರೆ. ಕಾರು ಚಾಲಕನನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Exit mobile version