Site icon PowerTV

ಲೋಕಸಭೆ ಟಾಸ್ಕ್ ಗೆಲ್ಲದೇ ಹೋದರೆ ಸಚಿವರ ತಲೆದಂಡ: ಸಚಿವ ಜಿ.ಪರಮೇಶ್ವರ್

ಬೆಂಗಳೂರು: ಲೋಕಸಭೆ ಚುನಾವಣೆ ಗೆಲ್ಲಲು ಸಚಿವರಿಗೆ ಹೈಕಮಾಂಡ್ ಟಾಸ್ಕ್ ನೀಡಿದೆ. ಟಾಸ್ಕ್‍ನಲ್ಲಿ ಉತ್ತಮ ಫಲಿತಾಂಶ ನೀಡದ ಸಚಿವರ ತಲೆದಂಡ ಕೂಡಾ ಆಗಲಿದೆ ಎಂದು ಹೈಕಮಾಂಡ್ ಎಚ್ಚರಿಕೆ ಕೊಟ್ಟಿದೆ ಎಂಬ ವಿಚಾರವನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್  ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಸಚಿವರಿಗೆ ಟಾಸ್ಕ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಲೋಕಸಭೆಯಲ್ಲಿ ಉತ್ತಮ ರಿಸಲ್ಟ್ ಕೊಡದೇ ಇರುವ ಸಚಿವರ ತಲೆದಂಡ ಆಗುತ್ತದೆ ಎಂದು ಹೈಕಮಾಂಡ್ ಹೇಳಿದೆ.

ಇದನ್ನೂ ಓದಿ: Suchana Seth: ಟಿಶ್ಯೂ ಪೇಪರ್‌ ಮೇಲೆ ಮಗನ ಹತ್ಯೆಗೆ ಸಂಚು ರೂಪಿಸಿದ್ದಳಾ ಸುಚನಾ ಸೇಠ್‌?

ಸಚಿವರ ಸ್ಪರ್ಧೆ ಬಗ್ಗೆ ನಿನ್ನೆಯ ಸಭೆಯಲ್ಲಿ ಮಾತಾಡಿಲ್ಲ. ನಿರೀಕ್ಷೆಯ ಫಲಿತಾಂಶ ಬಾರದೇ ಹೋದರೆ ಸಚಿವರ ತಲೆದಂಡವಾಗಲಿದೆ. ಸಚಿವರು ಚುನಾವಣೆ ಸಿರಿಯಸ್ ಆಗಿ ತೆಗೆದುಕೊಳ್ಳಬೇಕು. ಗೆಲ್ಲುವ ಕಡೆ ಸೋತರೆ ಅದನ್ನು ಸಹಿಸೋದಿಲ್ಲ. ಅದನ್ನ ನಾವು ಸಿರಿಯಸ್ ಆಗಿ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಎಂದಿದ್ದಾರೆ. ಸಚಿವರು ಚುನಾವಣೆ ಸಿರಿಯಸ್ ಆಗಿ ತಗೊಂಡಿಲ್ಲ ಎಂದರೆ ಕಷ್ಟ ಆಗಲಿದೆ. ಸಚಿವರಂತೆ ಸಿಎಂ ಹಾಗೂ ಡಿಸಿಎಂಗೆ ಸಹ ಟಾಸ್ಕ್ ಅನ್ವಯ ಆಗುತ್ತಾ ಎಂಬ ಪ್ರಶ್ನೆಗೆ, ಯಾರಿಗೆ ಇದು ಅನ್ವಯ ಆಗುತ್ತೆ ಎನ್ನುವ ವಿಚಾರ ಗೊತ್ತಿಲ್ಲ. ನಮಗೆ ಜನರಲ್ ಆಗಿ ಅವರು ಹೇಳಿದ್ದಾರೆ. ಎಲ್ಲರೂ ಸಿರಿಯಸ್ ಆಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದೆ ಕಷ್ಟ ಆಗಲಿದೆ ಎಂದು ಎಚ್ಚರಿಕೆ ಕೋಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

 

Exit mobile version