Site icon PowerTV

Chaddi Gang: ಗುಮ್ಮಟನಗರಿಗೆ ಎಂಟ್ರಿ ಕೊಟ್ಟ ಚಡ್ಡಿ ಗ್ಯಾಂಗ್!‌

ವಿಜಯಪುರ: ಐತಿಹಾಸಿಕ ಗುಮ್ಮಟನಗರಿಗೆ ಅಂತರರಾಜ್ಯ ಕಳ್ಳರಾದ ಚಡ್ಡಿ ಗ್ಯಾಂಗ್ ಎಂಟ್ರಿ ಕೊಟ್ಟಿದ್ದಾರೆ  ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

ರಾತ್ರಿ ದಾರಿಹೋಕರನ್ನು ಅಡ್ಡಗಟ್ಟಿ ದೋಚುವ, ಮನೆಮನೆಗೆ ನುಗ್ಗಿ ಕಳವು ಮಾಡುವ ಅಪಾಯಕಾರಿ ಚಡ್ಡಿ ಗ್ಯಾಂಗ್ 5 ರಿಂದ 8 ಜನರ ಒಟ್ಟಾಗಿ ಬನಿಯಾನ್, ಮಾಸ್ಕ್ ಧರಿಸಿ ಯಾರೂ ಇಲ್ಲದ ಮನೆಯನ್ನು ಟಾರ್ಗೆಟ್​ ಮಾಡಿ ಮನೆಗೆ ನುಗ್ಗಿ ದರೋಡೆ ಮಾಡುತ್ತಾರೆ.

ಇದನ್ನೂ ಓದಿ: ಟೀ ಪ್ರಿಯರೇ ಹುಷಾರ್!‌ ಬ್ರಾಂಡೆಡ್‌ ಟೀ ಪ್ಯಾಕಿನಲ್ಲಿ ನಕಲಿ ಪುಡಿ

ಚಡ್ಡಿ ಗ್ಯಾಂಗ್ ಬೇರೆ ಊರುಗಳಿಗೆ ತೆರಳುವಾಗ ಬಂಗಾರ, ಬೆಳ್ಳಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು  ಕೊಂಡೊಯ್ಯತ್ತಾರೆ ಇದನ್ನೂ ತಪ್ಪಿಸಲು ಪೊಲೀಸ್​ ಇಲಾಖೆ ನಿಗಾ ವಹಿಸಿ ಸಾರ್ವಜನಿಕರಿಗೆ ಮುನ್ಸೂಚನೆ ನೀಡಿದ್ದಾರೆ.

ಚಡ್ಡಿ ಗ್ಯಾಂಗ್ ವೇಶಭೂಷಣದಂತೆ ಯಾರಾದ್ರೂ ಅನುಮಾನಾಸ್ಪದ ರೀತಿಯಲ್ಲಿ ಕಂಡು ಬಂದಲ್ಲಿ ಪೊಲೀಸ್ ಕಂಟ್ರೋಲ್ ರೂಂ ERSS 112 ಗೆ ಕರೆ ಮಾಡಿ ಎಂದು ನಗರದ ಗಲ್ಲಿ ಗಲ್ಲಿಯಲ್ಲೂ ಆಟೋ ಮೂಲಕ ಪೊಲೀಸ್ರು ಮನವಿ ಮಾಡಿಕೊಂಡಿದ್ದಾರೆ.

Exit mobile version