Site icon PowerTV

ಭಾರತ-ಅಫ್ಘಾನ್ ಮೊದಲ ಟಿ-20 ಪಂದ್ಯ : ಧೋನಿ ದಾಖಲೆ ಉಡೀಸ್ ಮಾಡ್ತಾರಾ ರೋಹಿತ್?

ಬೆಂಗಳೂರು : ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯ ಇಂದು ಮೊಹಾಲಿಯ ಐಎಸ್​ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದೇ ಮೊದಲ ಬಾರಿಗೆ ಉಭಯ ತಂಡಗಳ ನಡುವೆ ಟಿ-20 ಸರಣಿ ನಡೆಯುತ್ತಿದೆ. ಸಂಜೆ 6.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಜಿಯೋ ಸಿನಿಮಾ ಅಪ್ಲಿಕೇಶನ್​ನಲ್ಲಿ ಉಚಿತವಾಗಿ ಪಂದ್ಯದ ಸ್ಟ್ರೀಮಿಂಗ್ ನೋಡಬಹುದು. ಸ್ಪೋಟ್ಸ್​ 18 ಚಾನೆಲ್​ನಲ್ಲಿ ಪಂದ್ಯದ ನೇರ ಪ್ರಸಾರವಾಗಲಿದೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಪರೂಪದ ದಾಖಲೆಯ ಸಮೀಪದಲ್ಲಿದ್ದಾರೆ. ಹಿಟ್​ ಮ್ಯಾನ್ ಇನ್ನೂ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಟಿ-20 ಪಂದ್ಯಗಳಲ್ಲಿ ಅತ್ಯಂತ ಯಶಸ್ವಿ ಭಾರತೀಯ ಕ್ಯಾಪ್ಟನ್ ಎಂಬ ಶ್ರೇಯಕ್ಕೆ ಪಾತ್ರರಾಗಲಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಸರಣಿ ಕ್ಲೀನ್ ಸ್ವೀಪ್ ಮಾಡಿದರೆ, ರೋಹಿತ್ ಶರ್ಮಾ ಅವರು ಧೋನಿ ದಾಖಲೆ ಉಡೀಸ್ ಮಾಡಲಿದ್ದಾರೆ.

ಮೊದಲ ಸ್ಥಾನದಲ್ಲಿ ಧೋನಿ

ಮಹೇಂದ್ರ ಸಿಂಗ್ ಧೋನಿ 72 ಪಂದ್ಯಗಳಲ್ಲಿ 41 ಗೆಲುವು ತಂದುಕೊಟ್ಟು ಮೊದಲ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 51 ಪಂದ್ಯಗಳಲ್ಲಿ 39 ಜಯದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿರುವ 50 ಪಂದ್ಯಗಳ ಪೈಕಿ 30ರಲ್ಲಿ ಭಾರತ ಗೆದ್ದಿದೆ.

Exit mobile version