Site icon PowerTV

ಕರ್ನಾಟಕದ ಖಜಾನೆ ಖಾಲಿ ಖಾಲಿ : ಬಿಜೆಪಿ ವ್ಯಂಗ್ಯ

ಬೆಂಗಳೂರು : ಕೇವಲ 7 ತಿಂಗಳ ಆಡಳಿತದಲ್ಲಿ ಸರ್ಕಾರವೊಂದರ ಖಜಾನೆ ಖಾಲಿಯಾಗಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು ಎಂದು ಆಡಳಿತರೂಢ ಕಾಂಗ್ರೆಸ್​ ಸರ್ಕಾರವನ್ನು ಬಿಜೆಪಿ ಲೇವಡಿ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಕೆಟ್ಟ ಆರ್ಥಿಕ ನೀತಿಗಳಿಂದ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಕಾಂಗ್ರೆಸ್​ ಸರ್ಕಾರ ಕರ್ನಾಟಕದ ಖಜಾನೆ ಖಾಲಿಯಾಗಿಸಿದೆ. ಈ ಮೂಲಕ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಕಾಡೆ ಮಲಗಿಸಿದೆ ಎಂದು ಕುಟುಕಿದೆ.

ಕರ್ನಾಟಕದಲ್ಲಿ ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ಸಹ ನೀಡಲಾಗದಂತಹ ದುಸ್ಥಿತಿ ನಿರ್ಮಾಣವಾಗಿದೆ. ಇದರ ಸಂಪೂರ್ಣ ಶ್ರೇಯ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.

ನೌಕರರ ಸಂಬಳಕ್ಕೆ ದುಡ್ಡೇ ಇಲ್ಲ

ಹೊಸ ನೇಮಕಾತಿ ಇಲ್ಲ, ಸರ್ಕಾರಿ ಕೆಲಸ ಸಿಗುವುದಿಲ್ಲ, ನೌಕರರ ಸಂಬಳಕ್ಕೆ ದುಡ್ಡೇ ಇಲ್ಲ. ಸಿಎಂ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಕರ್ನಾಟಕದ ಖಜಾನೆ ಸಂಪೂರ್ಣ ಖಾಲಿ ಖಾಲಿಯಾಗಿದೆ ಎಂದು ಛೇಡಿಸಿದೆ.

Exit mobile version