Site icon PowerTV

ಶಿವಮೊಗ್ಗದಲ್ಲಿ ಓರ್ವ ಪುರುಷ, ಮಹಿಳೆಯ ಶವ ಪತ್ತೆ

ಶಿವಮೊಗ್ಗ: ಮಲವಗೊಪ್ಪದ ಯಲವಟ್ಟಿ ತಿರುವಿನಲ್ಲಿ ಬುಧವಾರ ರಾತ್ರಿ 9ರ ಸುಮಾರಿಗೆ ಓರ್ವ ಮಹಿಳೆ ಮತ್ತು ಪುರುಷನ ಮೃತದೇಹ ದೊರೆತಿದೆ. ಮೃತದೇಹಗಳ ಪಕ್ಕದಲ್ಲಿ ವಿಷದ ಬಾಟಲಿ ಸಿಕ್ಕಿರುವುದರಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮೃತರು ಯಾರು, ಎಲ್ಲಿಂದ ಬಂದವರು, ಹೆಸರೇನು ಎಂಬುದು ತಿಳಿದು ಬಂದಿಲ್ಲ. ಇಬ್ಬರೂ ಅಂದಾಜು 50 ವರ್ಷ ಮೇಲ್ಪಟ್ಟವರಾಗಿದ್ದಾರೆ. ಯಾವುದೇ ಗುರುತಿನ ದಾಖಲೆ ಪತ್ರಗಳು ಲಭ್ಯವಾಗಿಲ್ಲ.

ಇದನ್ನೂ ಓದಿ: ಹಾನಗಲ್’ನಲ್ಲಿ ನೈತಿಕ ಪೊಲೀಸ್​ಗಿರಿ: ಲಾಡ್ಜ್​ಗೆ ಬಂದಿದ್ದ ಯುವಕ, ಯುವತಿಯ ಮೇಲೆ ಹಲ್ಲೆ

ಗುರುತು ಪತ್ತೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ನಂತರ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

 

 

Exit mobile version