Site icon PowerTV

ಬ್ರೇಕ್ ಫೇಲ್ : 45 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ರಾಯಚೂರು : ಬಸ್ ಬ್ರೇಕ್ ಫೇಲ್ ಆಗಿ ಚಾಲಕನ ಸಮಯ ಪ್ರಜ್ಞೆಯಿಂದ ರಸ್ತೆ ಬದಿಗೆ ವಾಲಿ, ಅದೃಷ್ಟವಶಾತ್ 45 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

ರಾಯಚೂರು ತಾಲ್ಲೂಕಿನ ವಡ್ಡೆಪಲ್ಲಿ ಗ್ರಾಮದ ಬಳಿ ಈ ಘಟನೆ ಜರುಗಿದೆ. ರಾಯಚೂರಿನಿಂದ ವಡ್ಡೆಪಲ್ಲಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಅರಸಿಗೇರಾ ಗ್ರಾಮದ ಬಳಿ, ಬಸ್ಸಿನ ಬ್ರೇಕ್ ಫೇಲ್ ಆಗಿದೆ.

ಚಾಲಕನ ಸಮಯ ಪ್ರಜ್ಞೆಯಿಂದ ಬಸ್ಸನ್ನು ಸುರಕ್ಷಿತವಾಗಿ ರಸ್ತೆ ಬದಿಗೆ ವಾಲುವಂತೆ ಮಾಡಿದ್ದಾನೆ. ಹಾಗಾಗಿ ಬಸ್ಸಿನಲ್ಲಿದ್ದ 45 ಪ್ರಯಾಣಿಕರು, ಯಾವುದೇ ಪ್ರಾಣಾಪಾಯ ಆಗದೆ ಪಾರಾಗಿದ್ದಾರೆ. ಇತ್ತ ಸಾರ್ವಜನಿಕರು ಸಾರಿಗೆ ಇಲಾಖೆಗೆ ಹಿಡಿ ಶಾಪ ಹಾಕಿದ್ದಾರೆ.

Exit mobile version