Site icon PowerTV

Killer CEO: ತಂದೆಯ ಜೊತೆ ಅಟ್ಯಾಚ್‌ಮೆಂಟ್ ಹೆಚ್ಚಾಗುತ್ತೆ ಎಂದು ಮಗುವನ್ನು ಕೊಂದೆ ಎಂದಳು ಹಂತಕಿ!

ಬೆಂಗಳೂರು:ʼನನಗೆ ಮಗನ ಮೇಲೆ ಅಪಾರ ಪ್ರೀತಿಯಿತ್ತು, ಅದಕ್ಕಾಗಿಯೇ ಮಗುವನ್ನು ಕೊಂದೆʼ ಎಂದು ಗೋವಾದಲ್ಲಿ ಮಗುವನ್ನು ಕೊಂದು ಬ್ಯಾಗಿನಲ್ಲಿ ಹಾಕಿ ತಂದ ಹಂತಕಿ, ಕಿಲ್ಲರ್‌ ಸಿಇಒ ಸುಚನಾ ಸೇಠ್‌  ಹೇಳಿದ್ದಾಳೆ.

ಮಗು ಹತ್ಯೆ ಪ್ರಕರಣದಲ್ಲಿ ಮೈಂಡ್‌ಫುಲ್‌ ಎಐ ಲ್ಯಾಬ್ಸ್‌ ಸಿಇಒ ಸುಚನಾ ಸೇಠ್ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ. ಮಗುವಿನ ಮೇಲಿನ ಪ್ರೀತಿ ಹಾಗೂ ಮಾಜಿ ಗಂಡನ ಮೇಲಿನ ದ್ವೇಷದಿಂದಾಗಿಯೇ ಈ ಕೊಲೆ ಮಾಡಿದ್ದೇನೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ.

ತನ್ನ ದಿನಚರಿ ಹೇಳಿ ಬಿಡುತ್ತೆ ಹಾಗು ತಂದೆಯ ಜೊತೆ ಅಟ್ಯಾಚ್‌ಮೆಂಟ್ ಹೆಚ್ಚಾಗುತ್ತೆ ಎಂಬ ಕಾರಣದಿಂದ ಪತಿ ವೆಂಕಟರಮಣ ಕರೆ ಮಾಡಿದಾಗ ಸುಚನಾ ಅದನ್ನು ರಿಸೀವ್ ಮಾಡಿರಲಿಲ್ಲ. ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಮಗು ತಂದೆ ಜೊತೆ ಹೋಗಿಬಿಡಬಹುದು ಹಾಗು ಕೋರ್ಟ್ ಕೂಡ ಇದಕ್ಕೆ ಸಮ್ಮತಿ ಸೂಚಿಸಬಹುದು ಎಂಬ ಕಾರಣಕ್ಕೆ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

“ನಮ್ಮ ವಿಚ್ಛೇದನ ಕೋರ್ಟ್‌ನಲ್ಲಿತ್ತು. ವಾರಕ್ಕೊಮ್ಮೆ ಪತಿ ವೆಂಕಟರಮಣನಿಗೆ ಮಗುವನ್ನು ವಿಡೀಯೋ ಕಾಲ್ ಮೂಲಕ ತೋರಿಸ್ಬೇಕಿತ್ತು. ಅದು ನನಗೆ ಇಷ್ಟ ಇರಲಿಲ್ಲ. ನನ್ನ ಮಗು ಕಂಡರೆ ನನಗೆ ಬಹಳ ಪ್ರೀತಿ. ಹೀಗಾಗಿ ನಾನು ಮಗುವಿನ ಪ್ರಜ್ಞೆ ತಪ್ಪಿಸಲು ಮುಖಕ್ಕೆ ದಿಂಬಿನಿಂದ ಒತ್ತಿ ಹಿಡಿದೆ. ಮಗು ಪ್ರಜ್ಞೆ ತಪ್ಪಿದೆ ಎಂದುಕೊಂಡಿದ್ದೆ. ಆದರೆ ಮಗು ಸಾವನ್ನಪ್ಪಿತ್ತು. ಇದೇ ನೋವಿನಲ್ಲಿ ಕೈ ಕುಯ್ದು ಆತ್ಮಹತ್ಯೆಗೆ ಯತ್ನಿಸಿದೆ. ಅದು ಸಾಧ್ಯವಾಗಿಲ್ಲ. ಗಾಬರಿಯಲ್ಲಿ ಏನೂ ಮಾಡಬೇಕೆಂದು ತೋಚದೆ ಸೂಟ್‌ಕೇಸ್‌ನಲ್ಲಿ ಹಾಕಿ ಪರಾರಿಯಾಗಲು ಯತ್ನಿಸಿದೆ” ಎಂದು ಸುಚನಾ ಸೇಠ್‌ ಹೇಳಿದ್ದಾಳೆ.

Exit mobile version