Site icon PowerTV

ಗುಡ್ ನ್ಯೂಸ್.. ಭಾರತದಲ್ಲಿಯೇ ನಡೆಯಲಿದೆ IPL-2024 ಟೂರ್ನಿ

ಬೆಂಗಳೂರು : ಐಪಿಎಲ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​ವೊಂದು ಸಿಕ್ಕಿದೆ. ಈ ಬಾರಿಯ ಐಪಿಎಲ್-2024​ ಟೂರ್ನಿ ಭಾರತದಲ್ಲಿಯೇ ನಡೆಯಲಿದೆ.

ಈ ವರ್ಷದ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೇರೆ ದೇಶದಲ್ಲಿ ಐಪಿಎಲ್​ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ, ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಐಪಿಎಲ್ ಭಾರತದಲ್ಲಿ ನಡೆಯುವ ಸಾಧ್ಯತೆಯಿದೆ, ಸ್ಥಳವನ್ನು ಬದಲಾಯಿಸುವ ಯೋಜನೆ ಇಲ್ಲ ಎಂದು ವರದಿಯಾಗಿದೆ.

ಚುನಾವಣಾ ಸಮಯದಲ್ಲಿ ಪಂದ್ಯವನ್ನು ನಡೆಸಲು ಯಾವುದೇ ಸ್ಥಳದಲ್ಲಿ (ಕ್ರೀಡಾಂಗಣ) ತೊಂದರೆಯಾದರೆ ಮತ್ತೊಂದು ಸ್ಥಳಕ್ಕೆ ಪಂದ್ಯವನ್ನು ಸ್ಥಳಾಂತರಿಸಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇನ್ನೂ ಇದೇ ಮಾರ್ಚ್​ 22ರಿಂದ ಐಪಿಎಲ್​-2024 ಟೂರ್ನಿ ಆರಂಭವಾಗುವ ಸಾಧ್ಯತೆಯಿದೆ.

ಐಪಿಎಲ್ ತಂಡಗಳು ಹಾಗೂ ನಾಯಕರು

Exit mobile version